ಶಿರಸಿ- ಕುಮಟಾ- ಬೇಲೇಕೇರಿ ರಾಷ್ಟ್ರೀಯ ಹೆದ್ದಾರಿ ಬಂದ್

(ನ್ಯೂಸ್ ಕಡಬ) newskadaba.com ಶಿರಸಿ, ಅ. 10:  ಬಹುನಿರೀಕ್ಷಿತ ಶಿರಸಿ- ಕುಮಟಾ- ಬೇಲೇಕೇರಿ ರಾಷ್ಟ್ರೀಯ ಹೆದ್ದಾರಿ 766 ಇಇ ವಿಸ್ತರಣೆ ಕಾಮಗಾರಿ ನಡೆಯುವ ಕಾರಣ, ಅ.12ರಿಂದ 18 ತಿಂಗಳ ಕಾಲ ಶಿರಸಿಯಿಂದ ಕುಮಟಾ ಹಾಗೂ ರಾಷ್ಟ್ರೀಯ ಹೆದ್ದಾರಿ 66ರ ಬೇಲೇಕೇರಿ ಕ್ರಾಸ್ ನಿಂದ ಬೇಲೇಕೇರಿ ಬಂದರಿನವರೆಗೆ ರಸ್ತೆಯನ್ನು ಬಂದ್ ಮಾಡಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ರಸ್ತೆಯನ್ನು 18 ತಿಂಗಳ ಕಾಲ ಬಂದ್ ಮಾಡಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿತ್ತು. ಭಾರತ್ ಮಾಲಾ ಫೇಸ್- 1 ಅಡಿಯಲ್ಲಿ ಬೇಲೇಕೇರಿ ಬಂದರನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ, ಬೇಲೇಕೇರಿ ಬಂದರು ಲಿಂಕ್ ರೋಡ್ ನಿಂದ 4.25 ಕಿ.ಮೀ. ಹಾಗೂ ಶಿರಸಿಯಿಂದ ಕುಮಟಾವರೆಗೆ 60 ಕಿ.ಮೀ. ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೊಳ್ಳಲಿದ್ದು, ಅಂದಾಜು 370 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ.ಕಾಮಗಾರಿ ಈ ತಿಂಗಳಲ್ಲೇ ಪ್ರಾರಂಭವಾಗಲಿದ್ದು, ಕಾಮಗಾರಿ ಸಂಪೂರ್ಣವಾಗಿ ಮುಗಿಯುವ ತನಕ ರಸ್ತೆಯನ್ನು ಬಂದ್ ಮಾಡಿ, ಪರ್ಯಾಯ ರಸ್ತೆ ಮಾರ್ಗ ಸೂಚಿಸಿ ಕಾಮಗಾರಿ ನಡೆಸಲು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದ್ದಾರೆ.

Also Read  ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್ ಶಿಪ್

 

error: Content is protected !!
Scroll to Top