ಮಂಗಳೂರು: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆ ಪ್ರಕರಣ ► ಸಿಓಡಿ ತನಿಖೆಗಾಗ್ರಹಿಸಿ ಅರೆಬೆತ್ತಲೆ ಮೆರವಣಿಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.23. ಇತ್ತೀಚೆಗೆ ನಡೆದ ಮೂಡುಬಿದಿರೆ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾಳ ಆತ್ಯಹತ್ಯೆ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ಜಸ್ಟಿಸ್ ಫಾರ್ ಕಾವ್ಯಾ ಹೋರಾಟ ಸಮಿತಿಯ ವತಿಯಿಂದ ಶನಿವಾರ ಅರೆಬೆತ್ತಲೆ ಮೆರವಣಿಗೆಯ ನಡೆಯಿತು.

ನಗರದ ಹಂಪನಕಟ್ಟೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಎ.ಬಿ.ಶೆಟ್ಟಿ ವೃತ್ತದ ಬಳಿ ಅರೆಬೆತ್ತಲೆ ಮೆರವಣಿಗೆಗೆ ಯತ್ನಿಸಿದ ಕೆಲವರ ಸಹಿತ ಕಾವ್ಯಾಳ ಪೋಷಕರಾದ ಲೋಕೇಶ್ ಪೂಜಾರಿ, ಬೇಬಿ ಪೂಜಾರಿ, ಸಹೋದರಿ ರಮ್ಯಾ, ಕರವೇ ಜಿಲ್ಲಾಧ್ಯಕ್ಷ ಅನಿಲ್‌ರಾಜ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

Also Read  ಜನಸ್ಪಂದನಾ ಸಮಿತಿ ಸುರುಳಿ ವತಿಯಿಂದ ಆಯುಷ್ಮಾನ್ ಕಾರ್ಡ್ ಅಭಿಯಾನ

ಮೆರವಣಿಗೆಯಲ್ಲಿ ಸಮಿತಿಯ ಸಂಚಾಲಕ ಹಾಗೂ ನ್ಯಾಯವಾದಿ ದಿನಕರ ಶೆಟ್ಟಿ, ದಲಿತ ಮುಖಂಡ ರಘವೀರ್ ಸೂಟರ್‌ಪೇಟೆ, ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಶಾಶ್ವತ ಕೊಟ್ಟಾರಿ, ಹರೀಶ್ ಅಮ್ಟಾಡಿ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

error: Content is protected !!
Scroll to Top