ವಿಟ್ಲ : ಒಂಟಿ ಮಹಿಳೆಯ ಮನೆಗೆ ಕಳ್ಳರ ಕನ್ನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 09: ವಿಟ್ಲದಲ್ಲಿ ಮುಂಜಾನೆ ವೇಳೆ ಒಂಟಿ ಮಹಿಳೆಯ ಮನೆಗೆ ಕನ್ನ ಹಾಕಿದ ಕಳ್ಳರು ದರೋಡೆ ಮಾಡಿ ಎಸ್ಕೆಪ್ ಆಗಿದ್ದಾರೆ.

 

 

ಒಂಟಿ ಮಹಿಳೆಯಿರುವ ಮನೆಗೆ ನುಗ್ಗಿದ ಮಹಿಳೆಗೆ ಹಲ್ಲೆ ನಡೆಸಿ ಕೈ ಕಾಲು ಕಟ್ಟಿ ಹಾಕಿ ದರೋಡೆ ಮಾಡಿರುವ ಘಟನೆ ವಿಟ್ಲ ಮೇಗಿನ ಪೇಟೆಯಲ್ಲಿ ನಡೆದಿದೆ. ಒಂಟಿಯಾಗಿ ಜೀವನ ನಡೆಸುತ್ತಿದ್ದ ಲಲಿತಾ ಎಂಬ ಮಹಿಳೆಯ ಮನೆಗೆ ಮುಂಬಾಗಿಲು ಮೂಲಕ ನುಗ್ಗಿ, ಮಹಿಳೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬಳಿಕ ಬಾಯಿಗೆ ಬಟ್ಟೆ ತುರುಕಿ, ಕೈ ಕಾಲು ಕಟ್ಟಿ ಹಾಕಿದ್ದಾರೆ. ಬಳಿಕ ಮನೆಯೊಳಗಡೆ ಚಿನ್ನಕ್ಕಾಗಿ ಹುಡುಕಾಟ ನಡೆಸಿದ್ದಾರೆ, ನಂತರ ಮಹಿಳೆಯ ಕುತ್ತಿಗೆಯಲ್ಲಿದ್ದ ಬೆಳ್ಳಿಯ ಸರ ಎಗರಿಸಿ ಮನೆ ಮುಂಭಾಗದ ಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದಾರೆ.

Also Read  ಬಜ್ಪೆಯ ಪೊರ್ಕೋಡಿಯಲ್ಲಿ ದಲಿತ ಮುಸ್ಲಿಂ ಸ್ನೇಹ ಸಮ್ಮಿಲನ

 

error: Content is protected !!
Scroll to Top