ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ, ತಂಬಾಕು ಮಾರಾಟಕ್ಕೆ ಬ್ರೇಕ್ .?!

 (ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 09: ಡ್ರಗ್ ಮಾಫಿಯಾದ ನಂಟನ್ನು ಬುಡಸಮೇತ ಕಿತ್ತು ಹಾಕಲು ರಾಜ್ಯ ಸರ್ಕಾರ ಭರ್ಜರಿಯಾಗಿಯೇ ಬೇಟೆಯಾಡ್ತಿದೆ. ಇದರ ಬೆನ್ನಲ್ಲೇ ತಂಬಾಕು, ಗುಟ್ಕಾವನ್ನ ಸಹ ಕಂಪ್ಲೀಟ್ ಆಗಿ ಬ್ಯಾನ್ ಮಾಡಲು ಸರ್ಕಾರ ಪಣತೊಟ್ಟಿದೆ.

 

ಈ ಸಂಬಂಧ ಸುಗ್ರಿವಾಜ್ಞೆ ಹೊರಡಿಸಲು ಮುಂದಾಗಿದೆ.ಇತ್ತೀಚೆಗ ಡ್ರಗ್ಸ್ ಜಾಲದ ನಂಟು ಅಷ್ಟರಮಟ್ಟಿಗೆ ಸದ್ದು ಮಾಡಿತ್ತು. ಡ್ರಗ್ಸ್ ಮಾಫಿಯಾವನ್ನ ಮಟ್ಟ ಹಾಕಲು ಸರ್ಕಾರ ಕೂಡ ಅಷ್ಟೇ ಸರ್ಕಸ್ ಮಾಡ್ತಿದೆ. ಇದೀಗ ಡ್ರಗ್ಸ್ ಜೊತೆಗೆ ಗುಟ್ಕಾ, ತಂಬಾಕವಿನ ಮಾರಾಟವನ್ನು ಬ್ಯಾನ್ ಮಾಡೋಕೆ ಸುಗ್ರೀವಾಜ್ಞೆ ಹೊರಡಿಸಲು ಸಿದ್ಧವಾಗಿದೆ.ಜುಲೈ 31 ರಂದು ತಂಬಾಕು, ಗುಟ್ಕಾ ಹಾಗೂ ತಂಬಾಕು ಮಿಶ್ರಿತ ಉತ್ಪನ್ನಗಳ ಮಾರಾಟ ನಿಷೇಧದ ಬಗ್ಗೆ ರಾಜ್ಯಪಾಲ ವಜುಭಾಯಿ ವಾಲಾ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು.

 

ಸಿಎಂ ಬಿಎಸ್‌ವೈ ಅಗತ್ಯ ಬಿದ್ದಲ್ಲಿ ಸುಗ್ರೀವಾಜ್ಞೆ ಹೊರಡಿಸುವುದಾಗಿ ರಾಜ್ಯಪಾಲರಿಗೆ ಭರವಸೆ ನೀಡಿದ್ದರು. ಅದರಂತೆ ಇದೀಗ ರಾಜ್ಯದಲ್ಲಿ ಗುಟ್ಕಾ, ತಂಬಾಕು, ಡ್ರಗ್ಸ್ ಮಾರಾಟ ನಿಷೇಧಿಸಲು ಸರ್ಕಾರ ಸಿದ್ಧವಾಗಿದೆ.ಒಟ್ಟಾರೆ, ರಾಜ್ಯದಲ್ಲಿ ಡ್ರಗ್ ಮಾಫಿಯಾವನ್ನು ಹೆಡೆಮುರಿ ಕಟ್ಟಲು ಹೊರಟಿರುವ ರಾಜ್ಯ ಸರ್ಕಾರ ಈಗ ಮತ್ತೊಂದು ಹೆಜ್ಜೆ ಇಟ್ಟಿದೆ.

 

 

error: Content is protected !!

Join the Group

Join WhatsApp Group