ಅಜ್ಜಿಯ ಆಸ್ತಿ ಕೊಳ್ಳೆ ಹೊಡೆದ ಮೊಮ್ಮಗಳು ➤ ವಿಚಾರ ತಿಳಿದು ಹಾಸಿಗೆ ಹಿಡಿದ ವೃದ್ಧೆ

(ನ್ಯೂಸ್ ಕಡಬ) newskadaba.com ಕಾಪು, ಅ. 08: ಕಾಪು ತಾಲೂಕಿನ ಸಾಂತೂರು ಗ್ರಾಮದ ಸಿಲೆಸ್ತಿನ್‌ ಅಂದ್ರಾದೆ ಎಂಬವರು ಕೂಲಿ ಮಾಡಿ ಸಂಪಾದಿಸಿದ ಹಣದಿಂದ ಖರೀದಿಸಿದ್ದ 2 ಎಕರೆ, ಅದರಲ್ಲಿ ಬೆಳಸಿದ್ದ ತೋಟ, ಕಟ್ಟಿದ್ದ ಮನೆಯನ್ನು, ಸ್ವತಃ ಅವರ ಮೊಮ್ಮಗಳು ಅಕ್ರಮವಾಗಿ ತನ್ನ ಹೆಸರಿಗೆ ಮಾಡಿಕೊಂಡಿದ್ದು, ಇದನ್ನು ತಿಳಿದು ಅಘಾತಗೊಂಡ ಸಿಲೆಸ್ತಿನ್‌ ಪಾಶ್ರ್ವವಾಯುಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ.

ಇದೀಗ ಪ್ರಕರಣ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಮೆಟ್ಟಿಲೇರಿದೆ. ಗಂಡ ಗ್ರೆಗರಿ ಡಿಸೋಜ ಕೆಲವರ್ಷಗಳ ಹಿಂದೆ ನಿಧನರಾದಾಗ ಸಿಲೆಸ್ತೀನ್‌ ಅವರು ಭೂಮಿ, ತೋಟ, ಮನೆಯನ್ನು 4 ಮಕ್ಕಳಿಗೆ ಸಮಪಾಲು ಮಾಡಿ ವೀಲುನಾಮೆ ಬರೆದು, ನೋಂದಾಯಿಸಿದ್ದದ್ದರು. ಇತ್ತೀಚೆಗೆ ಅಧಿಕಾರಿಗಳು ಕೃಷಿ ಸಮೀಕ್ಷೆಗೆ ಬಂದಾಗ ತನ್ನ ಮನೆ ಹಾಗೂ ಜಮೀನು ಹಿರಿಯ ಮಗ ರೋನಾಲ್ಡರ ಮಗಳು ರೋಶನಿಯಹೆಸರಿನಲ್ಲಿರುವುದು ಪತ್ತೆಯಾಯಿತು. ಇದರಿಂದ ತೀವ್ರ ಅಘಾತಗೊಂಡ ಸಿಲೆಸ್ತಿನ್‌ ಪಾಶ್ರ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ಅವರ ಪರವಾಗಿ ಮಾಜಿ ಸೈನಿಕ ಲಾರೆಸ್ಸ್‌ ಡಿಸೋಜ ಅವರು ಪ್ರಕರಣವನ್ನು ಪ್ರತಿಷ್ಠಾನಕ್ಕೆ ಸಲ್ಲಿಸಿದ್ದಾರೆ.

Also Read  ತಾ. ಜಿ.ಪಂ ಚುನಾವಣೆ..! ➤ ಏಪ್ರಿಲ್ 1ರೊಳಗೆ ಮೀಸಲು ಪ್ರಕಟ

error: Content is protected !!
Scroll to Top