RBI ನೂತನ ಡೆಪ್ಯುಟಿ ಗವರ್ನರ್‌ ಆಗಿ ಎಂ ರಾಜೇಶ್ವರ್‌ ರಾವ್‌ ಆಯ್ಕೆ

(ನ್ಯೂಸ್ ಕಡಬ) newskadaba.com ದೆಹಲಿ , ಅ. 08:  ಕೇಂದ್ರ ಸರ್ಕಾರವು ಬುಧವಾರ ತಡರಾತ್ರಿ ಎಂ.ರಾಜೇಶ್ವರ ರಾವ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ಹೊಸ ಉಪ ಗವರ್ನರ್ ಆಗಿ ನೇಮಕ ಮಾಡಿದೆ. ಪ್ರಸ್ತುತ ಅವರು ಬ್ಯಾಂಕಿಂಗ್ ನಿಯಂತ್ರಕದಲ್ಲಿ (regulator) ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.

 

ಕ್ಯಾಬಿನೆಟ್ ಕಾರ್ಯದರ್ಶಿ, ಆರ್‌ಬಿಐ ಗವರ್ನರ್ ಮತ್ತು ಹಣಕಾಸು ಸೇವೆಗಳ ಕಾರ್ಯದರ್ಶಿಯನ್ನು ಒಳಗೊಂಡ ಹಣಕಾಸು ವಲಯ ನಿಯಂತ್ರಣ ನೇಮಕಾತಿ ಶೋಧನಾ ಸಮಿತಿ ಆಗಸ್ಟ್ 21 ರಂದು ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿತ್ತು. ಆರ್‌ಬಿಐನಲ್ಲಿ, ವೃತ್ತಿಜೀವನ ಆರಂಭಿಸಿರುವ ರಾವ್ ಅವರು ನಿಯಂತ್ರಣ ಮತ್ತು ಮೇಲ್ವಿಚಾರಣೆ ಮತ್ತು ವಿವಿಧ ಪ್ರಾದೇಶಿಕ ಕಚೇರಿಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿ 36 ವರ್ಷಗಳ ಸೇವೆ ಸಲ್ಲಿಸಿದ್ದಾರೆ.

Also Read  ರಾಜ್ ಘಾಟ್ ಮತ್ತು ವಿಜಯ್ ಘಾಟ್ ಗೆ ತೆರಳಿ ಗೌರವ ಸಲ್ಲಿಸಿದ ರಾಷ್ಟ್ರಪತಿ, ಪ್ರಧಾನಿ

error: Content is protected !!
Scroll to Top