ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು ➤ ಅಪಾಯವಿಲ್ಲದೆ ಪಾರಾದ ಪ್ರಯಾಣಿಕರು

(ನ್ಯೂಸ್ ಕಡಬ) newskadaba.com ಬ್ರಹ್ಮಾವರ, ಅ. 08: ಕಳೆದ ದಿನ ಸಂಜೆ ಯಡ್ತಾಡಿಯಿಂದ ಬಂಡಿಮಠಕ್ಕೆ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

 

 

ಮಾರುತಿ ಸುಜುಕಿ ಸೀಯಾಜ್ ಕಾರು ಕೂಡ್ಲಿ ರಾಮಕೃಷ್ಣ ಅಡಿಗರ ಮನೆಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಸುಮಾರು ಆರು ಟಡಿ ಆಳದ ಕೆರೆಗೆ ಬಿದ್ದಿದೆ. ಅವಘಡ ಸಂಭವಿಸಿದ ಹೊತ್ತಲ್ಲೆ ಸ್ಥಳೀಯರು ಘಟನ ಸ್ಥಳಕ್ಕೆ ಆಗಮಿಸಿ ಕಾರಿನಲ್ಲಿದ್ದ ಮೂವರ ನ್ನು ರಕ್ಷಿಸಿದ್ದಾರೆ. ಸುಮಾರು 45 ನಿಮಿಷಗಳ ಪ್ರಯತ್ನದಲ್ಲಿ ಕಾರನ್ನು ಮೇಲೆತ್ತಿದ್ದಾರೆ. ಕಾರಿನಲ್ಲಿ ಮಂಗಳೂರಿನ ಕೋ ಅಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ತಮ್ಮ ಕುಟುಂಬ ಜತೆಗೆ ಕಾರಿನಲ್ಲಿ ಸಂಚರಿಸುತ್ತಿದ್ದರು ಎಂದು ತಿಳಿದು ಬಂದಿದೆ.

Also Read  ಕಡಬ: ಮಳೆಗೆ ಗುಡ್ಡ ಕುಸಿದು ಧರೆಗುರುಳಿದ ವಿದ್ಯುತ್ ಕಂಬ ► ಮೂರು ದಿನಗಳು‌ ಕಳೆದರೂ ಇನ್ನೂ ತೆರವುಗೊಳಿಸದ ಸ್ಥಳೀಯಾಡಳಿತ

 

error: Content is protected !!
Scroll to Top