ನಿನ್ನಿಕಲ್ಲು ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ ಆತ್ಯಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ , ಅ. 08: ಕೆಲವು ತಿಂಗಳ ಹಿಂದೆ ಹಿಂದೆ ಸುದ್ದಿಯಾಗಿದ್ದ ನಿನ್ನಿಕಲ್ಲು ನಿವಾಸಿ ಇಕ್ಬಾಲ್ ಸಾಧಿಕ್(27) ಎಂಬಾತ, ಕಳೆದ ದಿನ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆಡು ಮೇಯಿಸಲು ಹೋಗಿದ್ದ ಪರಿಶಿಷ್ಟ ಜಾತಿಯ ಯುವತಿಯನ್ನು ಅಡ್ಡಗಟ್ಟಿ ಅತ್ಯಾಚಾರ ಮಾಡಲು ಯತ್ನಿಸಿದಾಗ ಸಾರ್ವಜನಿಕರು ಹಿಡಿದು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದರು, ಬಳಿಕ ಈತನ ಮೇಲೆ ಅತ್ಯಾಚಾರ ಯತ್ನ ಕೇಸು ದಾಖಲಾಗಿದ್ದು ಜೈಲು ಪಾಲಾಗಿದ್ದ.

ಕೆಲ ದಿನಗಳ ಹಿಂದ ಜೈಲಿನಿಂದ ಜಾಮೀನ ಮೇಲೆ ಬಿಡುಗಡೆಹೊಂದಿದ್ದ. ಸ್ವಲ್ಪ ಮಟ್ಟಿಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಮಂಗಳವಾರದಂದು ಸ್ಥಳೀಯ ನಿವಾಸಿಗಳ ಜೊತೆ ಹಾಗೂ ಇಕ್ಬಾಲ್ ನಡುವೆ ಸಣ್ಣ ಪುಟ್ಟ ಗಲಾಟೆ ನಡೆದಿದೆ. ಇದರಿಂದ ಸ್ಥಳೀಯರು ಮತ್ತೆ ತನ್ನ ಮೇಲೆ ದೂರು ದಾಖಲಿಸಬಹುದು ಎಂದು ಭಯಗೊಂಡ ಇಕ್ಬಾಲ್ ಸಾಧಿಕ್ ಕಳೆದ ದಿನ ಮನೆಯ ಕೋಣೆಯಲ್ಲಿ ಕುತ್ತಿಗೆಗೆ ನೇಣು ಹಾಕಿಕೋಮಡು ಆತ್ಯಹತ್ಯೆಗೆ ಶರಣಾಗಿದ್ದಾನೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ - ಅರ್ಜಿ ಸಲ್ಲಿಕೆಗೆ ಇಂದು ಕೊನೇ ದಿನಾಂಕ

 

error: Content is protected !!
Scroll to Top