ಬೆಳ್ಳಂಬೆಳಗ್ಗೆ ಶೂಟೌಟ್ ಗೆ ನಲುಗಿದ ಸುಳ್ಯ..‼️ ➤ ಗುಂಡೇಟಿಗೆ ಓರ್ವ ಬಲಿ

(ನ್ಯೂಸ್ ಕಡಬ) newskadaba.com ಸುಳ್ಯ, ಅ.08. ಬೆಳ್ಳಂಬೆಳಗ್ಗೆ ಶೂಟೌಟ್ ಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಾಕ್ಷಿಯಾಗಿದ್ದು, ಸ್ಥಳೀಯ ಜನತೆಯನ್ನು ಬೆಚ್ಚಿ ಬೀಳಿಸಿದೆ.

 

ಸುಳ್ಯ ತಾಲೂಕಿನ ಶಾಂತಿನಗರ ಎಂಬಲ್ಲಿ ವಾಸವಿದ್ದ

ವ್ಯಕ್ತಿಯೋರ್ವರಿಗೆ ಗುರುವಾರ ಮುಂಜಾನೆ ಕಾರಿನಲ್ಲಿ ಆಗಮಿಸಿದ ಅಪರಿಚಿತರು ಗುಂಡಿಕ್ಕಿದ್ದಾರೆ. ಗಂಭೀರ ಗಾಯಗೊಂಡಿರುವ ಗಾಯಾಳುವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಅವರು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಸಂಪತ್ ಎಂದು ಗುರುತಿಸಲಾಗಿದೆ.

Also Read  ಕಳೆದ ವರ್ಷ ಅಣ್ಣ ಮೃತಪಟ್ಟ ದಿನವೇ ಈ ವರ್ಷ ತಮ್ಮ ಮೃತ್ಯು..!

error: Content is protected !!
Scroll to Top