ಉಡುಪಿ : ಮುದ್ದು ಮಗಳಿಗೆ “ಕನ್ನಡ” ವೆಂದು ನಾಮಕರಣ

(ನ್ಯೂಸ್ ಕಡಬ) newskadaba.com ಉಡುಪಿ, ಅ. 07: ಅಪ್ಪಟ್ಟ ಕನ್ನಡಾಭಿಮಾನಿ ಉದ್ಯಮಿಯೊಬ್ಬರು ನವೆಂಬರ್‍ನಲ್ಲಿ ಜನಿಸಿದ ತಮ್ಮ ಮುದ್ದಾದ ಮಗಳಿಗೆ “ಕನ್ನಡ” ಎಂಧು ಹೆಸರಿಟ್ಟಿದ್ದಾರೆ. ಕುಂದಾಪುರ ತಾಲೂಕಿನ ನೆಂಪುವಿನ ಪ್ರತಾಪ್ ಶೆಟ್ಟಿ – ಪ್ರತಿಮಾ ದಂಪತಿ ಮಗಳಿಗೆ ಕನ್ನಡ ಎಂಬ ಹೆಸರನ್ನಿಟ್ಟು ಕನ್ನಡಾಭಿಮಾನ ಮೆರೆದಿದ್ದಾರೆ.

ಬೆಂಗಳೂರಿನಲ್ಲಿ 2019 ರ ನವೆಂಬರ್ 27 ರಂದು ಜನಿಸಿದ ಚೊಚ್ಚಲ ಮಗಳಿಗೆ ಮಂದಿನ ತಿಂಗಳು ಹುಟ್ಟು ಹಬ್ಬದ ಸಂಭ್ರಮ. ಒಳಾಂಗಣ ವಿನ್ಯಾಸದ ಗುತ್ತಿಗೆ ವೃತ್ತಿಯಲ್ಲಿರುವ ಪ್ರತಾಪ್ ಶೆಟ್ಟಿ 25 ವರ್ಷಗಳಿಂದ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ನೆಲೆಸಿದ್ದಾರೆ.  ಕಾರ್ಯನಿಮಿತ್ತ ತಮಿಳುನಾಡಿಗೆ ತೆರಳಿದ್ದಾಗ ಅಲ್ಲಿ ಆನೇಕ ಮಂದಿಯ ಹೆಸರು ತಮಿಳರಸನ್ , ತಮಿಳುದೊರೈ ಮುಂತಾದ ರೀತಿಯಲ್ಲಿ ಇರುವುದನ್ನ ಗಮನಿಸಿದ ಪ್ರತಾಪ್ ಶೆಟ್ಟಿ ರವರು ತಮ್ಮ ಮಗಳಿಗೆ ಅದೇ ರೀತಿ ಹೆಸರಿಡಲು ಯೋಚಿಸಿದ್ದಾರೆ.

Also Read  ಬೆಳ್ತಂಗಡಿ: ನೇತ್ರಾವತಿ ಸ್ಥಾನಘಟ್ಟದಲ್ಲಿ ಸಾಬೂನ್, ಶಾಂಪೂ ಬಳಕೆ ನಿಷೇಧ

ಈ ಮೂಲಕ ಕನ್ನಡ ಪದ ಉಚ್ಚಾರಣೆಯಾಗುತ್ತಿರಲಿ ಎಂಬ ಬಯಕೆ ಇವರದ್ದಾಗಿತ್ತು. ಈ ಹೆಸರಿಗೆ ಪತ್ನಿಯು ಸಾಥ್ ನೀಡಿದ್ದಾರೆ. ಹೀಗಾಗಿ ತಮ್ಮ ಮುದ್ದು ಮಗಳಿಗೆ “ಕನ್ನಡ” ಎಂದು ನಾಮಕರಣ ಮಾಡಿದ್ದಾರೆ.

 

error: Content is protected !!
Scroll to Top