ಮಗಳಿಗಾಗಿ ಕಳ್ಳನಾದ ಅಪ್ಪ ➤ ಕಾರಣವೇನು ಗೋತ್ತೆ..?!

(ನ್ಯೂಸ್ ಕಡಬ) newskadaba.com ಮೈಸೂರು, ಅ. 07: ಮಗಳಿಗೆ ಮಕ್ಕಳಾಗಿಲ್ಲವೆಂದು ತಂದೆಯೊಬ್ಬ ಮಕ್ಕಳ ಕಳ್ಳನಾಗಿರುವ ವಿಚಿತ್ರ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ.

 

 

ನಾಲ್ಕು ದಿನಗಳ ಹಿಂದೆ ನಂಜನಗೂಡಿನಲ್ಲಿ ನಡೆದಿದ್ದ ಮಗು ಅಪಹರಣ ಪ್ರಕರಣ ಬೆನ್ನುಹತ್ತಿದ ಪೊಲೀಸರಿಗೆ ಇದೀಗ ಆರೋಪಿ ಗಂಗರಾಜು ಸಿಕ್ಕಿಬಿದ್ದಿದ್ದು, ವಿಚಾರಣೆ ವೇಳೆ ಆರೋಪಿ ಈ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ಹಲವು ವರ್ಷಗಳಿಂದ ನನ್ನ ಮಗಳಿಗೆ ಮಕ್ಕಳಿರಲಿಲ್ಲ. ಮಗುವೊಂದನ್ನು ತಂದು ಪೋಷಿಸಿದರೆ ತನ್ನ ಮಗಳಿಗೆ ಮಕ್ಕಳಾಗುತ್ತೆ ಎಂದು ಯಾರೋ ಹೇಳಿದ್ದ ಮಾತು ಕೇಳಿ ನಂಜನಗೂಡಿನ ಪಾರ್ವತಿ ಎಂಬ ಮಹಿಳೆಯ 3 ವರ್ಷದ ಮಗುವನ್ನು ಅಪಹರಿಸಿ ತನ್ನ ಮಗಳಿಗೆ ನೀಡಲು ಮುಂದಾಗಿದ್ದೆ ಎಂದು ತಿಳಿಸಿದ್ದಾನೆ. ಇದೀಗ ಆರೋಪಿ ಗಂಗರಾಜು ರನ್ನು ಬಂಧಿಸಲಾಗಿದೆ.

Also Read  ಉಪ್ಪಿನಂಗಡಿ: ಕಾಲೇಜು ವಿದ್ಯಾರ್ಥಿಗಳ ನಡುವೆ ಮಾರಾಮಾರಿ ➤‌ ಮೂವರು ವಶಕ್ಕೆ

 

error: Content is protected !!
Scroll to Top