ಕಾರವಾರ : ಇಂದು ಮತ್ತು ನಾಳೆ(ಅ.8) ಸಾಗರ ಕವಚ ಅಣುಕು ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಕಾರವಾರ , ಅ. 07: ಕಾರವಾರದಲ್ಲಿ ಇಂದು ಮತ್ತು ನಾಳೆ(ಅ.8) ಸಾಗರ ಕವಚ ಅಣುಕು ಕಾರ್ಯಾಚರಣೆ ನಡೆಯಲಿದೆ .

ಭಯೋತ್ಪಾದಕ ದಾಳಿ ಹಾಗೂ ಇತರ ಕೃತ್ಯಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಯಾವ ರೀತಿ ಅನುಸರಿಸಬೇಕು ಮತ್ತು ಭದ್ರತಾ ದೃಷ್ಟಿಯಿಂದ ಪ್ರಸ್ತುತ ರಕ್ಷಣಾ ಕ್ರಮಗಳು ಮತ್ತು ಸಿದ್ಧತೆಗಳು ಯಾವ ರೀತಿ ಸಮರ್ಥವಾಗಿವೆ ಎನ್ನುವುದನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವ ಉದ್ದೇಶದಿಂದ ರಾಜ್ಯ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪೊಲೀಸ್, ಭಾರತೀಯ ತಟ ರಕ್ಷಣಾ ದಳ ಹಾಗೂ ಭಾರತೀಯ ನೌಸೇನೆ ಜಂಟಿಯಾಗಿ ಅಕ್ಟೋಬರ್ 7 ಹಾಗೂ 8 ರಂದು ಸಾಗರ ಕವಚ ಅಣುಕು ಕಾರ್ಯಾಚರಣೆಯನ್ನು ನಡೆಸುತ್ತಿದೆ.

Also Read  ಎಡಮಂಗಲ: ರಸ್ತೆ ದುರಸ್ಥಿ ➤ ಗ್ರಾ.ಪಂ. ರಸ್ತೆ ನಾಗರಿಕರಿಂದ ಶ್ರಮದಾನ

ಅಣಕು ಕಾರ್ಯಾಚರಣೆಯ ಸಂದರ್ಭದಲ್ಲಿ , ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಬೀಚ್ ಗಳು, ದೇವಸ್ಥಾನ, ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ವ್ಯಾಪಕ ತಪಾಸಣೆ ನಡೆಯಲಿದ್ದು, ಈ ಸಂದರ್ಭ ಪೊಲೀಸರು ವಾಹನಗಳ ತಪಾಸಣೆ ಕೂಡಾ ನಡೆಸಲಿದ್ದಾರೆ.

error: Content is protected !!
Scroll to Top