ಹೆಸರಾಂತ ಫೊಟೋಗ್ರಾಫರ್ ಮಿನ್ನಿಪ್ಪಾಡಿ ಮಹಮ್ಮದ್ ಬೆಳ್ಳಾರೆ ನಿಧನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಅ.06. ಮುಂಬಯಿ ಸೇರಿದಂತೆ ದೇಶದ ವಿವಿಧೆಡೆ ಫೋಟೋಗ್ರಾಫರ್ ಹಾಗೂ ವೀಡಿಯೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದ ಮಿನ್ನಿಪ್ಪಾಡಿ ಮಹಮ್ಮದ್(65) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೂಲತಃ ಕಾಸರಗೋಡಿನ ಚೌಕಿಯವರಾದ ಮಿನ್ನಿಪ್ಪಾಡಿಯವರಾಗಿದ್ದ ಮಹಮ್ಮದ್ ಕಳೆದೆರಡು ವರ್ಷಗಳಿಂದ ಬೆಳ್ಳಾರೆಯಲ್ಲಿ ವಾಸವಾಗಿದ್ದರು. ಫೋಟೊಗ್ರಾಫರ್ ಹಾಗೂ ವೀಡಿಯೋಗ್ರಾಫರ್ ಆಗಿ ಮುಂಬೈ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬೆಳ್ಳಾರೆಯ ಮೀನು ವ್ಯಾಪಾರಿ ಅಂದುಂಞ ಕಾವಿನಮೂಲೆಯವರ ಸಹೋದರನಾಗಿರುವ ಮಹಮ್ಮದ್, ಮೃತದೇಹವು ಕಾವಿನ ಮೂಲೆಯ ಮನೆಯಲಿದ್ದು, ದಫನ ಕಾರ್ಯವು ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

Also Read  ಮೇಕೆದಾಟು "ನೀರಿಗಾಗಿ ನಡಿಗೆ" ಪಾದಯಾತ್ರೆಗೆ ಸುಳ್ಯದ ಕಾಂಗ್ರೆಸ್ ಪ್ರಮುಖರಿಂದ ಪಯಸ್ವಿನಿ ನದಿಗೆ ಭಾಗಿನ ಅರ್ಪಿಸಿ ಶುಭಹಾರೈಕೆ

error: Content is protected !!
Scroll to Top