ಕಾಸರಗೋಡು : ಜಿಲ್ಲಾಧಿಕಾರಿಯ ನಿವಾಸದ ಸಮೀಪ ಶ್ರೀಗಂಧ ಸಾಗಾಟಕ್ಕೆ ಯತ್ನ..!!

(ನ್ಯೂಸ್ ಕಡಬ) newskadaba.com ಕಾಸರಗೋಡು , ಅ. 06: ಕಾಸರಗೋಡು ಜಿಲ್ಲಾಧಿಕಾರಿಯ ನಿವಾಸದ ಸಮೀಪ ಇರುವ ನಿವಾಸದಲ್ಲಿ ಸುಮಾರು 2.5 ಕೋಟಿ ರೂ ಮೌಲ್ಯ ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿದ್ದು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿವಾಸಗಳಿಗೆ ಹತ್ತಿರವಿರುವ ಮನೆಯಲ್ಲಿ ಅಕ್ರಮ ಚಟುವಟಿಕೆ ಬೆಳಕಿಗೆ ಬಂದಿದೆ.

ಮುಂಜಾನೆ 4.30 ರ ಸುಮಾರಿಗೆ ನಿಲ್ಲಿಸಿದ ಟ್ರಕ್‌ಗೆ ಶ್ರೀಗಂಧದ ತುಂಡುಗಳನ್ನು ತುಂಬುತ್ತಿರುವುದನ್ನು ಕಂಡು ಬಂದಿದೆ. ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದ್ದು ಸ್ಥಳಕ್ಕೆ ತಲುಪಿದ ಜಿಲ್ಲಾಧಿಕಾರಿ, ಪೊಲೀಸರ ಸಹಾಯದೊಂದಿಗೆ ಅಕ್ರಮ ಸಾಗಾಟವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 30 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ ಶ್ರೀಗಂಧದ ತುಂಡುಗಳನ್ನು ಟ್ರಕ್‌ನಲ್ಲಿ ತುಂಬಿಸಲಾಗಿತ್ತು. ಸಿಮೆಂಟ್‌ ಸಾಗಾಟ ಮಾಡುವ ಈ ಟ್ರಕ್‌ನಲ್ಲಿ ಶ್ರೀಗಂಧವನ್ನು ಇರಿಸಲು ಟ್ರಕ್‌ನ ಲಗೇಜ್ ಇಡುವ ಸ್ಥಳದಲ್ಲಿ ವಿಶೇಷ ಕ್ಯಾಬಿನ್‌ನ್ನು ರಚಿಸಲಾಗಿತ್ತು. ದಾಳಿ ವೇಳೆ ಮನೆಯ ಮಾಲೀಕರು ಮತ್ತು ಆರೋಪಿಗಳು ಪರಾರಿಯಾಗಿದ್ದಾರೆ.ಶ್ರೀಗಂಧವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Also Read  ಅಡುಗೆ ಎಣ್ಣೆ ದರದಲ್ಲಿ ದಿಢೀರ್ ಏರಿಕೆ..!

 

error: Content is protected !!
Scroll to Top