ಆಂಧ್ರ ಪ್ರದೇಶದ ಸಿಎಂ ಪರಿಹಾರ ನಿಧಿ ಹೆಸರಿನಲ್ಲಿ ವಂಚನೆ ➤ ದ. ಕನ್ನಡ ಜಿಲ್ಲೆಯ ಆರು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು ಅ. 06: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪರಿಹಾರ ನಿಧಿಗೆ ವಂಚಿಸಲು ಯೋಜನೆ ರೂಪಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಆರು ಮಂದಿಯನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ಆಂಧ್ರದ ಎಸಿಬಿ ಪೊಲೀಸರ ತಂಡ ದ.ಕ ಜಿಲ್ಲೆಗೆ ಬಂದು ಆರು ಮಂದಿಯನ್ನು ಬಂಧಿಸಿದ್ದಾರೆ. ಮೂಡಬಿದ್ರೆ ನಿವಾಸಿಗಳಾದ ಯೋಗೀಶ್ ಆಚಾರ್ಯ (40) ಉದಯ ಶೆಟ್ಟಿ ಕಾಂತಾವಾರ (35), ಮಂಗಳೂರಿನ ಬ್ರಿಜೇಶ್ ರೈ(35) ಬೆಳ್ತಂಗಡಿಯ ಗಂಗಾಧರ ಸುವರ್ಣ (45) ಸೇರಿದಂತೆ ಆರು ಮಂದಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 117 ಕೋಟಿ ರೂ. ವಂಚಿಸಲು ಇವರು ಯೋಜನೆ ರೂಪಿಸಿದ್ದರು.

Also Read  ಜಿಲ್ಲಾ ಉಸ್ತುವಾರಿ ಸಚಿವರ ದ.ಕ. ಜಿಲ್ಲಾ ಪ್ರವಾಸ

ಆದರೆ ಈ ವಂಚನೆಯ ಬಗ್ಗೆ ಆಂದ್ರದ ಕಂದಾಯ ಇಲಾಖೆಯ ಸಹಾಯಕ ಕಾರ್ಯದರ್ಶಿ ಪಿ ಮುರಳಿಕೃಷ್ಣ ರಾವ್ ನೀಡಿದ ದೂರಿನ ಆಧಾರದ ಮೇರೆಗೆ ಅಂ.ಪ್ರದೇಶದ ತುಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಂದ್ರ ಸರ್ಕಾರ ಸಮಗ್ರ ತನಿಖೆ ನಡೆಸಿ, ದ. ಕನ್ನಡದ ಆರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಧ್ರ ಪ್ರದೇಶದ ಪೊಲೀಸರ ಕಾರ್ಯಚರಣೆಗೆ ದಕ್ಷಿಣ ಕನ್ನಡ ಪೊಲೀಸರು ಸಹಕಾರ ನೀಡಿದ್ದಾರೆ.

 

error: Content is protected !!
Scroll to Top