ಡಿಕೆಶಿ ಆಸ್ತಿ 5 ವರ್ಷದಲ್ಲಿ ಶೇ.380 ಹೆಚ್ಚಳ ➤ ಆರೋಪ ಸಾಬೀತಾದರೆ 7 ವರ್ಷ ಶಿಕ್ಷೆ..!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 06: ಸಿಬಿಐ ಅಧಿಕಾರಿಗಳು ದಾಖಲಿಸಿ ಕೊಂಡಿರುವ ಎಫ್​ಐಆರ್​ನಲ್ಲಿ ಡಿ.ಕೆ.ಶಿವಕುಮಾರ್ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದೆ. ಡಿಕೆಶಿ ಆಸ್ತಿ ಕೇವಲ 2013-18ರ 5 ವರ್ಷದ ಅವಧಿಯಲ್ಲಿ ಶೇ.380 ಹೆಚ್ಚಳವಾಗಿರುವುದು ಎಫ್​ಐಆರ್​ನಿಂದ ತಿಳಿದುಬಂದಿದ್ದು, ಭಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

2013ರ ಏ.13ರಂದು ಚುನಾವಣೆ ಅಫಿಡವಿಟ್ ಸಲ್ಲಿಸುವ ವೇಳೆ 33.92 ಕೋಟಿ ರೂ. ಇದ್ದ ಆಸ್ತಿಯು 2018 ಏ.30ಕ್ಕೆ 162.53 ಕೋಟಿ ರೂ.ಗೆ ಹೆಚ್ಚಳವಾಗಿದೆ. 2013-18ರ 5 ವರ್ಷದ ಅವಧಿಯಲ್ಲಿ ಒಟ್ಟು 128.60 ಕೋಟಿ ರೂ. ಆಸ್ತಿ ಪ್ರಮಾಣ ಹೆಚ್ಚಿದೆ. ಈ ಅವಧಿಯಲ್ಲಿ 166.79 ಕೋಟಿ ರೂ. ಆದಾಯ ಹೊಂದಿದ್ದು, 113.12 ಕೋಟಿ ರೂ. ಖರ್ಚು ಮಾಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ. ಘೋಷಿತ ಆದಾಯಕ್ಕಿಂತ 74.93 ಕೋಟಿ ರೂ. ಹೆಚ್ಚಿನ ಆದಾಯ ಹೊಂದಿರುವುದು ಪತ್ತೆಯಾಗಿದೆ.

Also Read  ಬೆಂಗಳೂರು ಬಂದ್ ಹಿನ್ನೆಲೆ - ವಿಮಾನ ಪ್ರಯಾಣವನ್ನು‌ ರದ್ದುಗೊಳಿಸಿದ ಏರ್ ಲೈನ್ಸ್

 

ಶೇ.44.93 ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವುದು ಕಂಡು ಬಂದಿದೆ ಎಂದು ಸಿಬಿಐ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.ಸಿಬಿಐ ಅಧಿಕಾರಿಗಳು ಪಿಸಿ ಕಾಯ್ದೆ 1988ರ ಅಡಿ 13(2), 13(1)(ಇ) ಸೆಕ್ಷನ್​ನಡಿ ಡಿ.ಕೆ.ಶಿವಕುಮಾರ್ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಸೆಕ್ಷನ್ 13(2) ಪ್ರಕಾರ 1 ವರ್ಷಕ್ಕೆ ಕಡಿಮೆ ಇಲ್ಲದಂತೆ ಗರಿಷ್ಠ 7 ವರ್ಷ ಶಿಕ್ಷೆ ಹಾಗೂ ದಂಡ, ಸೆಕ್ಷನ್ 13(1)(ಇ) ಪ್ರಕಾರ ಆದಾಯದ ಮೂಲ ದಾಖಲೆಗಳನ್ನು ಒದಗಿಸಬೇಕು. ಇಲ್ಲದಿದ್ದರೆ ಇದಕ್ಕೆ ಸೂಕ್ತ ಶಿಕ್ಷೆ ವಿಧಿಸಲಾಗುತ್ತದೆ.ಎಂದು ಮೂಲಗಳು ತಿಳಿಸಿವೆ.

error: Content is protected !!
Scroll to Top