ಬೆಳ್ತಂಗಡಿ : ಮರೆವಿನ ಕಾರಣದಿಂದ 3 ದಿನ ಕಾಡಿನಲ್ಲೆ ಉಳಿದ ವೃದ್ದ

 (ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ. 06. ಮರೆವಿನ ಕಾರಣದಿಂದ ಮನೆಗೆ ಬರುವ ವೇಳೆ ದಾರಿ ತಪ್ಪಿದ್ದ ವಯೋವೃದ್ಧರೊಬ್ಬರು ದಾರಿ ತಪ್ಪಿ ಕಾಡು ಸೇರಿ ಪವಾಡ ಅನ್ನುವಂತೆ ಬದುಕಿ ಬಂದ ಘಟನೆ ಬೆಳ್ತಂಗಡಿಯ ಮುಂಡಾಜೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಶಾಂತಿಗುಡ್ಡೆ ಕಾಡುಮನೆ ನಿವಾಸಿ ಅಣ್ಣು ಪೂಜಾರಿ(88) ಅಕ್ಟೋಬರ್‌ 1ರಂದು ಮನೆಯಿಂದ ಹೊರಗೆ ಹೋದವರು ಸಂಜೆಯಾದರೂ ಮರಳಿ ಮನೆಗೆ ಬಂದಿರಲಿಲ್ಲ.

 

ತಂದೆ ಮನೆಗೆ ಬಂದಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಮಕ್ಕಳು ಅವರು ಓಡಾಡುವ ಜಾಗಗಳಲ್ಲಿ ಹುಡುಕಾಡಿದ್ದಾರೆ. ಆದರೆ ಪತ್ತೆಯಾಗಿರಲಿಲ್ಲ. ಹೀಗಾಗಿ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ನಡುವೆ ಸ್ಥಳೀಯರು ಹಾಗೂ ಮನೆ ಮಂದಿ ಹುಡುಕಾಟ ಮುಂದುವರಿಸಿದ್ದರು. ಪೊಲೀಸರು ಕೂಡಾ ಅಣ್ಣು ಪೂಜಾರಿ ಪತ್ತೆಗೆ ಪ್ರಯತ್ನಿಸಿದ್ದರು. ಕೊನೆಗೆ NDRF ಹಾಗೂ ಶ್ವಾನ ಕರೆಸಿಕೊಳ್ಳಲು ನಿರ್ಧರಿಸಲಾಗಿತ್ತು.ಅಕ್ಟೋಬರ್ 4ರಂದು ಮನೆಯಿಂದ ಅಂದಾಜು 8 ಕಿ.ಮೀ. ದೂರದಲ್ಲಿರುವ ಕಾಡುಮನೆ ಕುಕ್ಕಾಡಿ ಎಂಬಲ್ಲಿ ಅಣ್ಣು ಪೂಜಾರಿ ಪತ್ತೆಯಾಗಿದ್ದಾರೆ. ಕಲ್ಲಿನ ಮೇಲೆ ಕುಳಿತ್ತಿದ್ದ ಅಷ್ಟು ಹೊತ್ತಿಗೆ ಬಳಲಿ ಹೋಗಿದ್ದರು. ಮೂರು ದಿನಗಳಿಂದ ಕಾಡಿನಲ್ಲಿ ಕೇವಲ ನೀರು ಕುಡಿದು ದಿನ ರಾತ್ರಿ ಕಳೆದಿದ್ದ ಅಣ್ಣು ಪೂಜಾರಿಯವರು ಇದೀಗ ಮನೆಗೆ ಮರಳಿದ್ದು ಆರೈಕೆ ಮಾಡಲಾಗುತ್ತಿದೆ.

Also Read  ಕಡಬ: ಕಿಡ್ಸ್ ಘಟಕ ಪ್ರತಿನಿಧಿಗಳಿಗೆ ನಾಯಕತ್ವ ತರಬೇತಿ ಶಿಬಿರ

 

 

error: Content is protected !!
Scroll to Top