ಮಾಳ :ಅಕ್ರಮವಾಗಿ ಮರ ಸಾಗಾಟ ➤ ಆರೋಪಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಕಾರ್ಕಳ, ಅ. 05.ಅಕ್ರಮವಾಗಿ ಮರಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದ ಕೆರ್ವಾಶೆ ಗ್ರಾಮದ ಉಮೇಶ್ (42) ಎಂಬಾತನನ್ನು ಮಾಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಇಂದು ಮುಂಜಾನೆ ಬಂದಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆಸಹಾಯಕ ಅರಣ್ಯ ಸಂರಕ್ಷಣಾಧಿ ಪ್ರಶಾಂತ್ ಪಿ.ಕೆ.ಎಂ, ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು, ಕಾಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾಋಇ ಅಶ್ವಿತ್ ಗಟ್ಟಿ ಮಂಜುನಾಥ್ ಗಾಣಿಗ, ಪ್ರಕಾಶ್ ಶೆಟ್ಟಿ, ಅರಣ್ಯ ರಕ್ಷಕರಾಧ ನಾಗರಾಜ ಸಂತೋಷ ದೇವಾಡಿಗ . ಅರಣ್ಯ ವಿಕ್ಷಕ ಶಿವಾನಂದ ಕಾರ್ಯಚರಣೆಯಲ್ಲಿ ತೊಡಗಿ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ವಿಚಾರಣೆಯ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

Also Read  ಭಯೋತ್ಪಾದಕರೊಂದಿಗೆ ನಂಟು ಆರೋಪ ➤ ಎನ್‍ಐಎಯಿಂದ ವೈದ್ಯಕೀಯ ವಿದ್ಯಾರ್ಥಿ ಬಂಧನ

error: Content is protected !!
Scroll to Top