ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಬಿ.ಸಿ ರೋಡಿನಲ್ಲಿ ಎಬಿವಿಪಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬಿ.ಸಿ ರೋಡು, ಅ. 05.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳದ ವತಿಯಿಂದ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಮನಿಷಾ ವಾಲ್ಮೀಕಿ ಎಂಬ ಯುವತಿಯ ಅತ್ಯಾಚಾರ ಪ್ರಕರಣ ವನ್ನು ಖಂಡಿಸಿ ಬಿ.ಸಿ ರೋಡಿನ ಮಿನಿ ವಿಧಾನಸೌಧದ ಮುಂಬಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

 

 

ಪ್ರತಿಭಟನೆಯನೆಯನ್ನು ಉದ್ದೇಶಿಸಿ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ನಿವೃತ್ತರಾಗಿರು ಪ್ರೊ. ನಾರಾಯಣ ಭಂಡಾರಿ ಮಾತನಾಡಿ”ಸಮಾಜದ ಯುವ ಜನರು ಸಂಸ್ಕಾರವಂತ ಶಿಕ್ಷಣ ಪಡೆದಾಗ ಮಾತ್ರ ಇಂತಹ ಪ್ರಕರಣಗಳು ಕಡಿಮೆಯಾಗುತ್ತದೆ. ಹಾಗೂ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಮರುಕಳಿಸಬಾರದೆಂದಿದ್ದರೆ ಕಠಿಣ ಕಾನೂನು ಜಾರಿಯಾಗಬೇಕು ಎಂದು ತಿಳಿಸಿದರು.
ಪ್ರತಿಭಟನೆ ಬಳಿಕ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನಿಷಾ ವಾಲ್ಮೀಕಿ ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಬೇಕು ಹಾಗೂ ಅತ್ಯಾಚಾರ ತಡೆಗೆ ಕಾನೂನಿನ ರಚನೆಯಾಗಬೇಕು ಎಂಬ ಮನವಿಯನ್ನು ಸಲ್ಲಿಸಲಾಯಿತು.

Also Read  ಬಿಸಿಯೂಟಕ್ಕೆ ಶಾಲೆಯಲ್ಲಿಯೇ ಬೆಳೆದರು ತರಕಾರಿ ➤ನೂಜಿಬಾಳ್ತಿಲ ಶಾಲೆಯಲ್ಲಿದೆ ವಿವಿಧ ಬಗೆಯ ತರಕಾರಿ ಕೈ ತೋಟ

 

error: Content is protected !!
Scroll to Top