ಅಂತರ್ ರಾಜ್ಯ ಮಟ್ಟದ ಲೇಖನ ಸ್ಪರ್ಧೆ ➤ ಪ್ರಥಮ ಸ್ಥಾನಿಯಾದ ಕಡಬದ ಸಮ್ಯಕ್ತ್ ಜೈನ್

(ನ್ಯೂಸ್ ಕಡಬ) newskadaba.com ಕಡಬ, ಅ. 05. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು, ಕೇಂದ್ರ ಸಮಿತಿ ಹುಬ್ಬಳ್ಳಿ, ಜಿಲ್ಲಾ ಮಹಿಳಾ ಘಟಕ ಧಾರವಾಡ ಇದರ ವತಿಯಿಂದ ಗಾಂಧೀ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯ ಪ್ರಯುಕ್ತ ನಡೆಸಲಾದ ರಾಜ್ಯ ಮತ್ತು ಅಂತರ್ ರಾಜ್ಯಮಟ್ಟದ ಲೇಖನ ಸ್ಪರ್ಧೆಯ ”ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ವದೇಶಿ ಆಂದೋಲನದ ಪ್ರಸ್ತುತತೆ” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಇದರಲ್ಲಿ ಭಾಗವಹಿಸಿದ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬಹುಮುಖ ಪ್ರತಿಭೆ ಸಮ್ಯಕ್ತ್ ಜೈನ್ ರವರು ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಈ ಮೂಲಕ ಸಂಸ್ಥೆಯಿಂದ ಕೊಡಲ್ಪಡುವ ಪುರಸ್ಕಾರಕ್ಕೆ ಭಾಜನರಾಗಿರುತ್ತಾರೆ. ಯುವ ಬರಹಗಾರ, ವಾಗ್ಮಿ, ನಿರೂಪಕ, ಲೇಖಕ, ಕವಿ, ವಿಮರ್ಶೆಗಾರ, ನಾಟಕ ರಚನೆಗಾರರಾಗಿಯೂ ಗುರುತಿಸಿಕೊಂಡಿರುವ ಇವರು ತನ್ನ ಎಳೆ ಪ್ರಾಯದಲ್ಲಿಯೇ ಮೂರು ಕವನ ಸಂಕಲನಗಳನ್ನು ಬರೆದು ಬಿಡುಗಡೆಗೊಳಿಸಿರುತ್ತಾರೆ. ರಾಜ್ಯ ಹಾಗು ಅಂತರ್ ರಾಜ್ಯ ಮಟ್ಟದ ಹಲವು ಸ್ಪರ್ಧೆಗಳಲ್ಲಿ ಭಾಗವಿಸಿ ಬಹುಮಾನ ಪಡೆದಿರುವ ಈತ ಇದೀಗ ಮತ್ತೊಂದು ಸಾಧನೆಯ ಗರಿಮೆಯನ್ನು ತನ್ನದಾಗಿಸಿಕೊಂಡಿದ್ದಾನೆ. ಈತ ನೂಜಿಬಾಳ್ತಿಲದ ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಮತ್ತು ಶ್ರೀಮತಿ ಮಂಜುಳಾರವರ ಸುಪುತ್ರ.

Also Read  ವಿದ್ಯುತ್ ತಗುಲಿ ತಾಯಿ-ಮಗು ಮೃತ್ಯು

error: Content is protected !!
Scroll to Top