ಗಾಂಜಾ ಮತ್ತಿನಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಯುವಕರ ತಂಡ ➤ ಮಾಡಿದ್ದೇನು ಗೊತ್ತೇ..?!!



(ನ್ಯೂಸ್ ಕಡಬ) newskadaba.com ಮಂಗಳೂರು, ಅ. 05. ಗಾಂಜಾ ಮತ್ತಿನಲ್ಲಿ ಮನೆಗೆ ನುಗ್ಗಿದ ಯುವಕರ ತಂಡವೊಂದು ಮನೆ ಮಂದಿಗೆ ತಲವಾರು ತೋರಿಸಿ ಬೆದರಿಸಿ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಪಚ್ಚನಾಡಿನಲ್ಲಿ ನಡೆದಿದೆ.





 

ಪಚ್ಚನಾಡಿನಲ್ಲಿ ತಡರಾತ್ರಿ ಘಟನೆ ನಡೆದಿದ್ದು ಫ್ರಾನ್ಸಿಸ್ ಎಂಬುವರ ಮನೆಗೆ ನುಗ್ಗಿ ದಾಂದಲೇ ನಡೆಸಿದೆ. ನಿತಿನ್ ಮತ್ತು ಮಹೇಶ್ ಎಂಬುವರ ತಂಡ ತಲವಾರು ಹಿಡಿದು ನಡೆಸಿರುವ ಘಟನೆ, ಸ್ಥಳೀಯರ ಮೊಬೈಲ್ ನಲ್ಲಿ ಸರೆಯಾಗಿದೆ. ಇನ್ನು ಈ ಬಗ್ಗೆ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.






ನಿತಿನ್ ಎಂಬಾತ ಸ್ಥಳೀಯ ರೌಡಿಶೀಟರ್ ಆಗಿದ್ದು ಗಾಂಜಾ ಮತ್ತಿನಲ್ಲಿ ಪರಿಸರದಲ್ಲಿ ರೌಡಿಸಂ ನಡೆಸುತ್ತಿದ್ದಾನೆ, ಅದರಂತೆ ತಡರಾತ್ರಿಯು ಫ್ರಾನ್ಸಿಸ್ ಮೆಲೆಯೂ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಆತನ ತಾಯಿಯ ಮೇಲೆಯೂ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ದಾಂದಲೇಯಲ್ಲಿ ಕಾರ್ತಿಕ್ ಎಂಬಾತನ Pಕಾಲಿಗೆ ಕಡಿದ್ದದ್ದು ಸೆರೆಯಾಗಿದೆ ಎಂದು ತಿಳಿದು ಬಂದಿದೆ.

 

 

error: Content is protected !!
Scroll to Top