ಸುಬ್ರಹ್ಮಣ್ಯ :ಎಸ್ಕಾಂಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ. 05. ಸುಬ್ರಹ್ಮಣ್ಯದಲ್ಲಿ ಎಸ್ಕಾಂಗಳ ವತಿಯಿಂದ ಖಾಸಗೀಕರಣ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಇಂದು ಪ್ರತಿಭಟನೆ ನಡೆಸಿದ್ದಾರೆ.  ರಾಜ್ಯಾದಾದ್ಯಂತ ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ಮಡುವುದನ್ನು ವಿರೋಧಿಸಿ ಸುಬ್ರಹ್ಮಣ್ಯ ಸಬ್ ಸ್ಟೇಶನ್ ನ ವ್ಯಾಪ್ತಿಯ ನೌಕಕರು ಇಂಧು ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಳಗ್ಗೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಎಲ್ಲರೂ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕರ್ನಾಟಕ ವಿದ್ಯುತ್ ಪ್ರಸಡರಣ ನಿಗಮ ನೌಕರರ ಸಂಘ ಮತ್ತು ಸಂಘಗಳ ಒಕ್ಕೋಟ ವತಿಯಿಂದ ಪ್ರತಿಭಟನೆ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಸಬ್ ಸ್ಟೇಶನ್ ನ ಸಹಾಯಕ ಇಂಜಿನಿಯರ್ ಚಿದಾನಂದ, ಗುತ್ತಿಗಾರು ಸಬ್ ಸ್ಟೇಶನ್‍ನ ಮೇಲ್ವಿವಾಋಕ ಲೋಕೇಶ್ ಎಣ್ಣೆಮಜಲು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸಂಘದ ಪ್ರತಿನಿಧಿ ವಸಂತ ಹಾಘೂ ಸುಬ್ರಹ್ಮಣ್ಯ ಉಪವಿಭಾಗ ನೌಕರರು ಉಪಸ್ಥಿತರಿದ್ದರು.

Also Read  ರೈಲು ಹಳಿ ಮೇಲೆ ಕಬ್ಬಿಣದ ರಾಡ್‌ ಪತ್ತೆ

 

 

 

error: Content is protected !!
Scroll to Top