ಸರಕಾರಿ ಬಸ್ ಗಳ ನಡುವೆ ಢಿಕ್ಕಿ- ಸಹ ಪ್ರಯಾಣಿಕರಿಗೆ ಗಾಯ

(ನ್ಯೂಸ್ ಕಡಬ) newskadaba.com ಮುಲ್ಕಿ, ಅ. 05. ಎರಡು ಸರಕಾರಿ ಬಸ್ಸುಗಳ ನಡುವೆ ಢಿಕ್ಕಿ ಸಂಭವಿಸಿ ಹನ್ನೆರಡು ಜನ ಗಾಯಗೊಂಡ ಘಟನೆ ರಾ.ಹೆ. 66ರ ಹಳೆಯಂಗಡಿಯ ಕೆನರಾ ಬ್ಯಾಂಕ್ ಎದುರುಗಡೆ ಬೆಳಿಗ್ಗೆ ನಡೆದಿದೆ.


ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ಮಂಗಳೂರು ಡಿಪೋ ಸರಕಾರಿ ಬಸ್ಸೊಂದು ಉತ್ತರ ಕರ್ನಾಟಕದ ಸರಕಾರಿ ಬಸ್ ಗೆ ಹಿಂದಿನಿಂದ ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿ ಬಳಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮಂಗಳೂರು ಡಿಪೋ ಬಸ್ಸು ಹೆದ್ದಾರಿಯಿಂದ ಚರಂಡಿಗೆ ಸರಿದಿದ್ದು, ಸ್ಥಳೀಯ ರಿಕ್ಷಾ ಚಾಲಕನ ಸಹಕಾರದಿಂದ ತಕ್ಷಣ ಸ್ಥಳಕ್ಕೆ ಆಂಬುಲೆನ್ಸ್ ತರಿಸಿ ಗಾಯಾಳುಗಳನ್ನು ಅಸ್ಪತ್ರೆಗೆ ಸಾಗಿಸಲಾಯಿತು. ಗಾಯಾಳುಗಳ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಅಪಘಾತದ ರಭಸಕ್ಕೆ ಎರಡೂ ಬಸ್ಸುಗಳಿಗೆ ಹಾನಿಯಾಗಿದ್ದು, ಸ್ಥಳಕ್ಕೆ ಸುರತ್ಕಲ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಬೆಂಗಳೂರು: ಪರಿಷತ್ ನ ನಾಲ್ಕು ಕ್ಷೇತ್ರಗಳಿಗೆ ಇಂದು ಮತದಾನ

error: Content is protected !!
Scroll to Top