ಉಡುಪಿ ಜಿ.ಪಂ. ನೂತನ ಸಿಇಒ ಆಗಿ ಡಾ| ನವೀನ್‌ ಭಟ್‌ ನೇಮಕ

(ನ್ಯೂಸ್ ಕಡಬ) newskadaba.com ಉಡುಪಿ, ಅ. 05. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಅವರನ್ನು ಭಾನುವಾರ ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಡಾ. ವೈ. ನವೀನ್ ಭಟ್‌ ಅವರನ್ನು ನಿಯೋಜಿಸಲಾಗಿದೆ.

 

 

ನವೀನ್‌ ಭಟ್‌ 2017ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದು, ಹಾಸನ ಉಪ ವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರೀತಿ ಗೆಹ್ಲೋಟ್‌ ಸೆ. 07, 2019ರಂದು ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಸದ್ಯಕ್ಕೆ ಸರಕಾರ ಅವರಿಗೆ ಯಾವುದೇ ಸ್ಥಾನವನ್ನು ತೋರಿಸಿಲ್ಲ.

 

 

2019ರ ಸೆಪ್ಟೆಂಬರ್ ತಿಂಗಳ ಮೊದಲ ವಾರ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಸಿಂಧೂ ರೂಪೇಶ್ ಅವರ ಸ್ಥಾನಕ್ಕೆ ಪ್ರೀತಿ ಗೆಹ್ಲೋಟ್ ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಿದ್ದರು. ಇದೀಗ ಸಿಇಓ ಆಗಿ ನೇಮಕಗೊಂಡಿರುವ ನವೀನ್ ಭಟ್ ವೈ. 2016ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 37ನೇ ರ್ಯಾಂಕ್ ಪಡೆದಿದ್ದರು. ಮೂಲತ: ಉಡುಪಿ ಜಿಲ್ಲೆ ಕಾಪು ತಾಲೂಕು ಎಲ್ಲೂರಿನವರಾದ ನವೀನ್ ಭಟ್, ಈಗ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್‌ನ ನಿವಾಸಿಯಾಗಿರುವ ಲೋಕೋಪಯೋಗಿ ಇಲಾಖೆಯ ಹಿರಿಯ ಇಂಜಿನಿಯರ್ ಆಗಿರುವ ಉಮೇಶ್ ಭಟ್ ಅವರ ಪುತ್ರ.

Also Read  ಕರ್ನಾಟಕ ರಾಜ್ಯ ವಕ್ಫ್ ಮಂಡಳಿ : ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಆದರ್ಶ ಮಸೀದಿಯಾಗಿ ಆಯ್ಕೆ ; 80,000 ರೂ ಚೆಕ್ ಮಂಜೂರು

 

 

error: Content is protected !!
Scroll to Top