(ನ್ಯೂಸ್ ಕಡಬ) newskadaba.com ಸುಳ್ಯ, ಅ. 04. ಧರ್ಮ ಸಂಸ್ಕಾರ ಮಾನವ ಜನಾಂಗ ಗೊತ್ತುಪಡಿಸಿದ ಒಂದು ಆಧ್ಯಾತ್ಮಿಕ ವಿಚಾರವೆಂದು ಅಜ್ಜಾವರ ಚೈತನ್ಯ ಸೇವಾ ಆಶ್ರಮದ ಶ್ರೀ ಯೋಗೇಶ್ವರನಂದ ಸರಸ್ವತಿ ಸ್ವಾಮೀಜಿ ಅವರು ಹೇಳಿದರು.
ಅವರ ಕೃತಿ ಪರಿವರ್ತನೆ ಅರೆಭಾಷೆಗೆ ಭಾಷಾಂತರ ಕೊಂಡಿದ್ದು, ಅದರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಮನೆಯ ಮಾತು ಸಂಸ್ಕಾರ ಅನ್ಯೋನ್ಯತೆಯನ್ನು ನಾವು ಯಾವತ್ತೂ ಕಡೆಗಣಿಸಬಾರದು. ಧರ್ಮ ನೀತಿ ಸಂಸ್ಕಾರ ಎಲ್ಲವೂ ಸಾಹಿತ್ಯಗಳಲ್ಲಿ ಅಡಕವಾಗಿವೆ. ನಮ್ಮ ಏಳಿಗೆಗೆ ಗುರುಹಿರಿಯರ ಆಶೀರ್ವಾದ ಮುಖ್ಯ, ಭಾಷೆ ಒಂದು ಮಾಧ್ಯಮ, ಪ್ರತಿಯೊಂದು ಭಾಷೆಯು ಮುಖ್ಯವಾಗಿದೆ. ಕಲೆ ಸಾಹಿತ್ಯ ಸಂಸ್ಕೃತಿಗೆ ಜಾತಿ, ವರ್ಗ, ಧರ್ಮದ ಭೇದವಿಲ್ಲ ಎಂದು ಅವರು ಹೇಳಿದರು.
ಉದಯೋನ್ಮುಖ ಸಾಹಿತಿ ಕವಿ ಯೋಗೀಶ್ ಹೊಸಯೋಳಿಕೆಯವರ ಸ್ವಾಮೀಜಿಯವರ ಕೃತಿ ಪರಿವರ್ತನೆಯನ್ನು ಅರೆ ಭಾಷೆಗೆ ಭಾಷಾಂತರಗೊಳಿಸಿದ್ದು, ಅದನ್ನು ವೈದೆ ಸಾಯಿಗೀತಾಬಿಡುಗಡೆಗೊಳಿಸಿದರು. ನಂತರ ಅವರು ಮಾತನಾಡಿ ಪ್ರತಿಯೊಂದು ಭಾಷೆಯ ಸಾಹಿತ್ಯವನ್ನು ನಾವು ಗೌರವಿಸಬೇಕು. ನಾವು ಬೆಳೆಯುತ್ತಾ ನಮ್ಮ ಹೃದಯದ ಭಾಷೆಯನ್ನು ಹೆಚ್ಚು ಗೌರವಿಸುತ್ತೇವೆ, ಸಾಹಿತ್ಯಗಳನ್ನು ಓದುವುದರಿಂದ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದರು. ಯೋಗೀಶ್ ಹೊಸಯೋಳಿಕೆ ಮಾತನಾಡಿ ನಾವು ಸಮಾಜಕ್ಕೆ ಕೊಡುಗೆ ನೀಡಬೇಕು ನಮ್ಮಿಂದ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗದಿದ್ದರೆ ಸಮಾಜಕ್ಕೆ ನಾವು ಕೆಟ್ಟದು ಮಾಡಬಾರದು ಎಂದು ಹೇಳಿದರು. ಸಾಹಿತಿ ಭೀಮರಾವ್ ವಾಸ್ಟರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರೊಫೆಸರ್ ಅನಿಲ್ ಬಿ.ವಿ, ಪ್ರೊಫೆಸರ್ ರೇಖಾ, ಚೈತನ್ಯ ಸೇವಾಶ್ರಮದ ಪ್ರಣವಿ ಮತ್ತಿತರರು ಉಪಸ್ಥಿತರಿದ್ದರು.