ಕಡಬದಲ್ಲಿಂದು SSF ದಕ್ಷಿಣ ಕನ್ನಡ ಬ್ಲಡ್ ಸೈಬೋ ಇದರ ರಕ್ತದಾನ ಶಿಬಿರ ➤ 50 ಕ್ಕೂ ಅಧಿಕ ರಕ್ತದಾನಿಗಳಿಂದ ರಕ್ತದಾನ

 (ನ್ಯೂಸ್ ಕಡಬ) newskadaba.com ಕಡಬ, ಅ. 04. SSF ಕಡಬ ಸೆಕ್ಟರಿನ ಆಶ್ರಯದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಮತ್ತು ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ SSF ದಕ್ಷಿಣ ಕನ್ನಡ ಬ್ಲಡ್ ಸೈಬೋ ಇದರ 196ನೇ ಸಾರ್ವಜನಿಕ ರಕ್ತದಾನ ಶಿಬಿರ ಇಂದು (ಅ.04) ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಡಬದಲ್ಲಿ ನಡೆಯಿತು.

ಇನ್ನು ಸುಮಾರು50 ಕ್ಕೂ ಅಧಿಕ ಮಂದಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಪ್ರಸ್ತುತ ಸಭೆಯ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರಾದ ಝಿಯಾರ್ ಕೋಡಿಂಬಾಳ ವಹಿಸಿದರು. ನಾಸಿರ್ ಸಅದಿ ಪನ್ಯರವರ ದುಆದೊಂದಿಗೆ ಪ್ರಾರಂಭವಾದ ಸಭೆಯನ್ನು ಹಾಜಿ ಮೀರಾನ್ ಸಾಹೇಬ್ ಕಡಬರವರು ಉದ್ಘಾಟಿಸಿದರು. SYS ಜಿಲ್ಲಾ ಸದಸ್ಯರಾದ ನಾಸಿರ್ ಸಅದಿ
ಹಾಗೂ ಕಡಬ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಅಬ್ದುಲ್ ಹಮೀದ್ ಮಾಸ್ಟರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಪ್ರಸ್ತುತ ರಕ್ತದಾನ ಶಿಬಿ‌ರದ ಪ್ರಮಾಣಪತ್ರವನ್ನು ಹಾಜಿ ಮೀರಾನ್ ಸಾಹೇಬ್ ರವರು ಹಂಝ ಕಳಾರರವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಕ್ಯಾಂಪಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋದ ಉಸ್ತುವಾರಿಯಾದ ಕರೀಂ ಕದ್ಕಾರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

SSF ದಕ್ಷಿಣ ಕನ್ನಡ ಈಸ್ಟ್ ಝೋನ್ ಅಧ್ಯಕ್ಷರಾದ ಅಯ್ಯೂಬ್ ಮಹ್ಲರಿ‌ ಹಾಗೊ SSF ಉಪ್ಪಿನಂಗಡಿ ಡಿವಿಶನ್ ಬ್ಲಡ್ ಸೈಬೋ ಉಸ್ತುವಾರಿ ಇಸ್ಹಾಕ್ ಮದನಿಯವರನ್ನು ಸನ್ಮಾನಿಸಲಾಯಿತು. SSF ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷರಾದ FH ಮುಹಮ್ಮದ್ ಮಿಸ್ಬಾಹಿಯವರು ಶಿಬಿರಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಶರೀಫ್ ಕಲ್ಲಾಜೆ ಸ್ವಾಗತಿಸಿ, ಕಾರ್ಯದರ್ಶಿ ಹಾರಿಸ್ ಕೋಡಿಂಬಾಳ ವಂದಿಸಿದರು.

 

error: Content is protected !!

Join the Group

Join WhatsApp Group