ಬಿಳಿನೆಲೆ : ಭಾರತೀಯ ಜನತಾ ಪಾರ್ಟಿ ಶಕ್ತಿ ಕೇಂದ್ರ ವತಿಯಿಂದ ಕುಟುಂಬ ಮಿಲನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬಿಳಿನೆಲೆ , ಅ. 04.ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಲದ ರಂಗ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಶಕ್ತಿ ಕೇಂದ್ರ ಇದರ ವತಿಯಿಂದ ಕುಟುಂಬ ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಶಾಸಕ ಎಸ್ ಅಂಗಾರರವರು ಆಗಮಿಸಿದರು. ಬಳಿಕ ಮಾತನಾಡಿದ ಅವರು, “ಪ್ರೀತಿ ವಿಶ್ವಾಸ ವಿದ್ದರೆ ಮಾತ್ರ ಯಾವುದೇ ಕುಟುಂಬ ಸಂಘಟನೆ ಉಳಿಯಲು ಸಾಧ್ಯ. ಅದರಂತೆ ಬಾಳೋಣ, ಸಂಘದ ಏಳಿಗಾಗಿ ದುಡಿಯೋಣ ಇದರ ಜೊತೆಗೆ ಜನತೆಯ ಏಳಿಗಾಗಿ ಆಗಾಬೇಕಾದ ಬೆಳವಣಿಯನ್ನು  ಒಟ್ಟಾಗಿ ಸೇರಿ ಮಾಡೋಣ, 1956 ರಿಂದ ಜನ ಸಂಘಟನೆಯಿಂಧ ಸಂಘದ ಸಹಕಾರದ ಮೂಲಕ ದೇಶಕ್ಕಾಗಿ ತನ್ನ ಬಲಿದಾನ ಮಾಡಿ, ಸಮಾಜದಲ್ಲಿ ಒಂದು ರಾಷ್ಟ್ರವಾಗಿ ನಿರ್ಮಿಸಲು ಕಂಕಣ ಭಾಗ್ಯ ವಿದ್ದರು, ಈಗ ಎಲ್ಲರ ಪಾತ್ರ ಅಗತ್ಯವಾಗಿರುತ್ತದೆ. ಈಗ ರಾಷ್ಟ್ರ ಮತ್ತು ರಾಜ್ಯದಲ್ಲಿ ಯೋಜನೆ ರೂಪಿಸಲು ಪ್ರಧಾನಿ ಮೋದಿಯವರು ಹಲವು ಯೋಜನೆಗಳನ್ನು ತಂದು ಯಶಸ್ಸು ಹಂಚಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಬಡ ಜನರಿಗೆ ಅಕ್ರಮ ಸಕ್ರಮ 94ಸಿ ಯೋಜನೆ ನಿವೇಶನ ಮತ್ತು ಸಾಗುವಳಿ ಭೂಮಿಯನ್ನು ಸಕ್ರಮ ಗೊಳಿಸಲು ಬೈಲುವಾರು ಸಮಿತಿ ಮಾಡಿ ಶ್ರಮ ವಹಿಸುತ್ತೆವೆ ಎಂದು ತಿಳಿಸಿದರು”.

Also Read  ಗುರುಪುರ ಹೋಬಳಿ ಮೊಗರು ಗ್ರಾಮದ ಮಳಲಿಪೇಟೆ ➤ ವಶಪಡಿಸಿರುವ 880 ಕೆ.ಜಿ. ಪಡಿತರ ಅಕ್ಕಿ ಬಹಿರಂಗ ಹರಾಜು

ಬಳಿಕ ಅಯೋಧ್ಯೆ ಕರ ಸೇವೆಯಲ್ಲಿ ಭಾಗವಹಿಸಿದ ಸೂಡ್ಲು ಧರ್ಮಾಪಾಲ ಗೌಡ ಹಾಗೂ ರಘು ಚೆಂಡೆಹಿತ್ಲು ಅವರನ್ನು ಸನ್ಮಾನಿಸಲಾಯಿತು. ಬಳಿಕ ನೂತನವಾಗಿ, ಹಿರಿಯಣ್ಣ ಗೌಡ ಸೂಡ್ಲು, ಸುರೇಶ್ ಬಿಳಿನೆಲೆ ಅವರ ತಂಡ ಭಾರತೀಯ ಜನತಾ ಪಾರ್ಟಿ ಗೆ ಸೆರ್ಪಡೆಗೊಂಡಿತ್ತು. ಕಾರ್ಯಕ್ರಮದಲ್ಲಿ ವಾಡ್ಯಪ್ಪ ಗೌಡ ಎರ್ಮಯಿಲ್, ಗಿರೀಶ್ ಎ. ಪಿ, ಹರೀಶ್ ಕೇಶವ ಭಟ್ ಮುಳಿಯ, ದಾಮೋದರ ಗೌಡ ಗುಂಡ್ಯ, ಹರ್ಷಿತ್ ಸೂಡ್ಲು, ಪ್ರಸಾದ್ ನೆಟ್ಟಣ. ವಿನಯ ಪುತ್ತಿಲ, ಸತೀಶ್ ಎರ್ಕ, ಸರೋಜಿನಿ, ದುಗ್ಗಪ್ಪ ಗೌಡ ಸೂಡ್ಲು, , ಉಮೇಶ್ ಗೌಡ ಯಶೋಧರ ಕೈಕಂಬ,ಚಿನ್ನಪ್ಪ ಮದೆಪರ್ಲ , ಬಾಲಕೃಷ್ಣ ಸಣ್ಣಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ಸಾಮಾಜಿಕ ಅಂತರ ಕಾಯ್ದು ಕೊಂಡು ಮಾಸ್ಕ್ ಧರಿಸಿ ಸಹಕಾರ ನೀಡಿದರು.

Also Read  ವಾಸ್ತು ದೋಷ ಹಾಗೂ ವಿಘ್ನಗಳ ನಿವಾರಣೆಗೆ ಯಾವ ದೇವಿಯನ್ನು ಪೂಜೆ ಮಾಡಬೇಕೆಂಬುದು ಈ ವಿಧಾನದಿಂದ ತಿಳಿದುಕೊಳ್ಳಿ

error: Content is protected !!
Scroll to Top