ಸುಬ್ರಹ್ಮಣ್ಯ :ಹತ್ರಾಸ್ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ A.B.V.Pಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ, ಅ. 04. ಉತ್ತರ ಪ್ರದೆಶದಲ್ಲಿ ನಡೆದ ಮನಿಷಾ ವಾಲ್ಮೀಕಿ ಎಂಬ ಯುವತಿಯ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಘಟಕ, ವತಿಯಿಂದ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಕಾರ್ಯಕರ್ತರಾದ ಪದ್ಮ ಕುಮಾರ್ ಇವರು ಪ್ರಾಸ್ತಾವಿಕ ಮಾತನಾಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು. ಹಿರಿಯ ಕಾರ್ಯಕರ್ತಆದ ಬುಕಿತ್ ನೀರ್ಪಾಡಿ , ವಿದ್ಯಾರ್ಥಿ ನಾಯಕ ರಕ್ಷಿತ್ ಪರಮಲೆ, ನಗರ ಕಾರ್ಯದರ್ಶಿ ಹಿತೇಶ್ ಕಟ್ರಮನೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Also Read  ಅಮಾಯಕ ಜೀವವನ್ನು ಬಲಿಪಡೆದ ಹೊಸ್ಮಠದ ಅವೈಜ್ಞಾನಿಕ ಹಂಪ್ ➤ ಬೈಕ್ ಸ್ಕಿಡ್ ಆಗಿ ಮಹಿಳೆ ಮೃತ್ಯು

 

 

error: Content is protected !!
Scroll to Top