ಕಾರ್ಕಳ : ಕೊರೊನಾ ಸೋಂಕಿತ ವ್ಯಕ್ತಿ ಆತ್ಮಹತ್ಯೆಗೆ ಶರಣು

 (ನ್ಯೂಸ್ ಕಡಬ) newskadaba.com ಕಾರ್ಕಳ, ಅ. 04. ಕೊರೊನಾ ಸೋಂಕು ದೃಢಪಟ್ಟ ವ್ಯಕ್ತಿಯೊಬ್ಬರು ಮಾನಸಿಕ ನೊಂದು ಶುಕ್ರವಾರ ರಾತ್ರಿ ತಮ್ಮ ಮನೆಯ ಹಿಂದಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ಮಾರ್ಕೆಟ್ ರಸ್ತೆಯ ರಾಧಿಕಾ ಟಾಕೀಸ್ ಬಳಿಯ ನಿವಾಸಿ ಪ್ರಸನ್ನ ಆರ್ಯ(46)ಎಂಬವರು ಆತ್ಮಹತ್ಯೆ ಮಾಡಿಕೊಂಡವರು.

 

ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಪ್ರಸನ್ನ ಅವಿವಾಹಿತರಾಗಿದ್ದು ಒಬ್ಬಂಟಿಯಾಗಿ ಮನೆಯಲ್ಲಿ ವಾಸವಿದ್ದರು. ಕಳೆದ ನಾಲ್ಕು ದಿನದಿಂದ ಜ್ವರ ಹಾಗೂ ಬೇಧಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ಮಾಡಿದ್ದರು. ಇವರಿಗೆ ಕೊರೊನಾ ಸೋಂಕು ಖಚಿತವಾದ ಬಳಿಕ ಆಶಾ ಕಾರ್ಯಕರ್ತೆ ಔಷಧಿ ನೀಡಿ ಮನೆಯಲ್ಲೇ ಇರಲು ಸೂಚಿಸಿದ್ದರು.ಪ್ರಸನ್ನ ಅವರು ತೀವ್ರವಾಗಿ ವಿಚಲಿತರಾಗಿ ಶುಕ್ರವಾರ ಮಧ್ಯರಾತ್ರಿ ನೊಂದು ಬಾವಿಗೆ ಹಾರಿ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.ಈ‌ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Also Read  ಆತೂರು ದಿಕ್ರ್‌ ಹಲ್ಕಾ ವಾರ್ಷಿಕೋತ್ಸವ ► ದ್ಸಿಕ್ರ್‌, ಸ್ವಲಾತ್ ನಿಂದ ಹೃದಯ ಪರಿಪೂರ್ಣತೆ: ತ್ವಾಖಾ ಅಹ್ಮದ್ ಮೌಲವಿ

error: Content is protected !!
Scroll to Top