ಚಿತ್ರಸಾಹಿತಿ ಕೆ. ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು..!!

 (ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 04. ಸ್ಯಾಂಡಲ್ ವುಡ್ ನ ಖ್ಯಾತ ಚಿತ್ರಸಾಹಿತಿ ಕೆ. ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪತ್ನಿ ಅಶ್ವಿನಿ ಕಾಣೆಯಾಗಿದ್ದಾರೆಂದು ಮಾವ ಮತ್ತು ಅತ್ತೆಯ ವಿರುದ್ಧ ಖ್ಯಾತ ಸಾಹಿತಿ ಕೆ.ಕಲ್ಯಾಣ್ ದೂರು ದಾಖಲಿಸಿದ್ದಾರೆ. ಬೆಳಗಾವಿಯ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಕೆ.ಕಲ್ಯಾಣ್ ಸೆಪ್ಟಂಬರ್ 30 ರಂದು ದೂರು ನೀಡಿದ್ದಾರೆ.

ಕಲ್ಯಾಣ್ ದೂರಿನ ಆಧಾರದ ಮೇಲೆ ಪೊಲೀಸರು ಇಂದು ಪತ್ನಿ ಅಶ್ವಿನಿಯನ್ನು ಕರೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗಲಾಟೆಯ ಬಗ್ಗೆ ಸ್ಪಷ್ಟನೆ ನೀಡಿರುವ ಅಶ್ವನಿ, ತಮ್ಮ ಪತಿ ಕೆ ಕಲ್ಯಾಣ್ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ. ಕಲ್ಯಾಣ್ ಜೊತೆ ಇನ್ಮುಂದೆ ಜೀವನ ನಡೆಸುವುದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಅಶ್ವಿನಿ ಕಳೆದ 6 ತಿಂಗಳಿಂದ ನಾವು ಒಟ್ಟಿಗೆ ಇಲ್ಲ ಎಂದು ತಿಳಿಸಿದ್ದಾರೆ.ನನ್ನ ವಿರುದ್ಧ ಪತ್ನಿ ಅಶ್ವಿನಿ ಮಾಡುತ್ತಿರುವ ಆರೋಪ ಆಕೆಯ ಅನಿಸಿಕೆ. ನನ್ನ ವಿರುದ್ಧ ಮಾಡಲಾದ ಆರೋಪ ಸಂಬಂಧ ಪತ್ನಿ ಅಶ್ವಿನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದರು.

Also Read  ರಷ್ಯಾದ 13 ಡ್ರೋನ್‌ ಹೊಡೆದುರುಳಿಸಿದ ಉಕ್ರೇನ್‌

 

 

error: Content is protected !!
Scroll to Top