ರಾತ್ರೋ ರಾತ್ರಿ ಅಕ್ರಮವಾಗಿ ಕಾರಿನಲ್ಲಿ ಗೋ ಸಾಗಾಟ ➤ ಭಜರಂಗಿಗಳ ದಾಳಿ, ತಪ್ಪಿಸಿಕೊಳ್ಳುವ ಬರದಲ್ಲಿ ಗೋ ಕಳ್ಳರ ಕಾರು ಪಲ್ಟಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ. 04. ಅಕ್ರಮ ಗೋ ಸಾಗಾಟ,ಗೋ ಕಳ್ಳತನ ಕರಾವಳಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಲೇಯಿದೆ. ಇಂತಹ ಕೃತ್ಯಗಳಿಗೆ ಯಾವಾಗ ಕೊನೆ ಸಿಗುತ್ತದೊ ಗೊತ್ತಿಲ್ಲ. ಕಳೆದೊಂದು ತಿಂಗಳಿನಿಂದ ಅಕ್ರಮ ಗೋ ಸಾಗಾಟದ ಕೃತ್ಯಗಳು ಬಯಲಿಗೆ ಬರುತ್ತಲೇಯಿದೆ. ಅದರಂತೆ ಕಳೆದ ದಿನ ರಾತ್ರಿ ಗೋ ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ ಕಾರೊಂದು ಪಲ್ಟಿಯಾಗಿದೆ.

ತಡ ರಾತ್ರಿ ಸುಮಾರು 2.30 ರವೆಳೆಗೆ ಬೆಳ್ತಂಗಡಿ ತಾಲೂಕಿನ ಉಜಿರೆ ಸುರ್ಯ ಪಡ್ಪುವಿನಿಂದ ಕಳ್ಳತನ ಮಾಡಿದ ಸುಮಾರು 4 ದನಗಳನ್ನು ಇನ್ನೋವಾ ಕಾರಿನಲ್ಲಿ ತುಂಬಿಸಿ ಕಸಾಯಿಖಾನೆಗೆ ಸಾಗಿಸುವಾಗ ಉಜಿರೆ ಭಜರಂಗದಳದ ಕಾರ್ಯಕರ್ತರು ಬೆನ್ನತ್ತಿದ್ದು, ಈ ವೇಳೆ ಪರಾರಿಯಾಗಲು ಯತ್ನಿಸಿದ ಗೋಕಳ್ಳರ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಬಳಿಕ ಭಜರಂಗದಳದ ಕಾರ್ಯಕರ್ತರು & ಸ್ಥಳೀಯರು ಸೇರಿ ಗೋವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, 4 ಜನ ಗೋ ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

Also Read  ಪುತ್ತೂರು: ವಾಕಿಂಗ್ ಹೋಗುತ್ತಿದ್ದಾಗ ಬೈಕ್ ಢಿಕ್ಕಿ ► ಗಂಭೀರ ಗಾಯಗೊಂಡಿದ್ದ ಪಾದಚಾರಿ ಮೃತ್ಯು

 

 

error: Content is protected !!
Scroll to Top