ಬೈಕ್ ಅಪಘಾತದಲ್ಲಿ ಕೈ ಮೂಳೆ ಮುರಿತ ➤ ಶ್ರೀ ಗೋಪಾಲಕೃಷ್ಣ ಭ. ಮಂ. ಸದಸ್ಯರಿಂದ ಆರ್ಥಿಕ ನೆರವು

(ನ್ಯೂಸ್ ಕಡಬ) newskadaba.com ಬಿಳಿನೆಲೆ, ಅ. 04. ಶ್ರೀ ಸಚಿನ್ ಶರ್ಮ ರವರು ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ನಾಯಿ ಅಡ್ಡ ಬಂದ ಪರಿಣಾಮ ಅಪಘಾತಕ್ಕೀಡಾಗಿ ಕೈ ಮೂಳೆ ಹಾಗೂ ಕಾಲಿಗೆ ಏಟು ಬಿದ್ದು ಗಾಯಗೊಂಡಿದ್ದರು.

ಇನ್ನು ಇವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರಿಂದ ಅವರಿಗೆ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ವತಿಯಿಂದ ಸಂಗ್ರವಾದ ಧನಸಹಾಯವನ್ನು ಕಳೆದ ದಿನ ಅವರ ಮನೆಗೆ ತೆರಳಿ, ಸದಸ್ಯರಾದ, ಸುಂದರ ಗೌಡ ಒಗ್ಗು, ದಿನೇಶ್ ಮದೆಪರ್ಲ, ಜನಾರ್ದನ ಸಣ್ಣಾರ, ಕುಮಾರ್, ಪುರುಷೋತ್ತಮ ಸಣ್ಣಾರವರು ಧನ ಸಹಾಯ ನೀಡಿದರು. ಶ್ರೀ ಸಚಿನ್ ಶರ್ಮ ರವರು, ಶ್ರೀ ಸಚಿನ್ ಶರ್ಮ ನಿಂತಿಕಲ್ಲು ಇವರು ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಇವರು ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಭಜನಾ ಕಾರ್ಯಕ್ರಮಕ್ಕೆ ಹೋದಲ್ಲೆಲ್ಲ ಭಜನಾ ಮಂಡಳಿ ಜೊತೆಗೆ ಬಂದು ತಬಲ ನುಡಿಸುತ್ತಿದ್ದರು.

Also Read  ಮಂಗಳೂರು: ಕಾರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಸಾಗಾಟ ➤ ನಾಲ್ವರ ಬಂಧನ

 

error: Content is protected !!
Scroll to Top