ಕಾರ್ಕಳ : ಬಡ ಕುಟುಂಬಕ್ಕೆ ಸೋಲಾರ್ ದೀಪ ನೀಡಿ ನೆರವು

(ನ್ಯೂಸ್ ಕಡಬ) newskadaba.com ಕಾರ್ಕಳ, ಅ. 03. ವಿದ್ಯುತ್ ಸಂಪರ್ಕ ಇಲ್ಲದೆ ಜೀವನ ನಡೆಸುತ್ತಿದ್ದ ನಿಟ್ಟೆ ಗ್ರಾಮದ ಕಲಂಬಾಡಿ ಪದವು ನ ನಿವಾಸಿ ಶ್ಯಾಮಲಾ ಪೂಜಾರ್ತಿರವರ ಬಡ ಕುಟುಂಬವೊಂದಕ್ಕೆ ದಾನಿಗಳು ಸೋಲಾರ್ ಲೈಟಿಂಗ್ ವ್ಯವಸ್ಥೆ ಮಾಡಿ ಕೊಟ್ಟು, ಬಡ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

 

 

ಸೋಲಾರ್ ದೀಪದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲವಾಯಿತು. ದಾನಿಗಳಿಗೆ ಧನ್ಯವಾದಗಳು ಎಂದು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಸೋಲಾರ್ ದೀಪ ವ್ಯವಸ್ಥೆಯನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಜೇಸಿ ದಿವಾಕರ ಬಂಗೇರ, ಜನನಿ ಮಿತ್ರ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಕುಲಾಲ್ ಉದ್ಯಮಿ ಹರೀಶ್ ಅಮೀನ್ ,ಪಂಚಾಯತ್ ಮಾಜಿ ಸದಸ್ಯ ರಾಜೇಶ್ ಆಚಾರ್ಯ ಮತ್ತು ಆನಂದರಾಯ ನಾಯಕ್ ಉಪಸ್ಥಿತರಿದ್ದರು.

Also Read  ಅಲ್-ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ - ಅಧ್ಯಕ್ಷರಾಗಿ ಆಸಿಫ್ ಪಾಪೆತ್ತಡ್ಕ, ಕಾರ್ಯದರ್ಶಿಯಾಗಿ ರಿಯಾಝ್ ಶಾಂತಿಗೋಡು

 

 

 

error: Content is protected !!
Scroll to Top