ಹತ್ರಾಸ್ ಅತ್ಯಾಚಾರ ಪ್ರಕರಣ: ಯುವತಿಗೆ ನ್ಯಾಯ ಒದಗಿಸಿಕೊಡಲು ಮುಂದಾದ ವಕೀಲೆ ಸೀಮಾ ಖುಷ್ವಾ

(ನ್ಯೂಸ್ ಕಡಬ) newskadaba.com ಹತ್ರಾಸ್ , ಅ. 03. ಹತ್ರಾಸ್ ನಲ್ಲಿ ನಾಲ್ವರು ಕಾಮುಕರ ಕೈಯಲ್ಲಿ ಬರ್ಬರವಾಗಿ ಹತ್ಯೆಯಾದ ಯುವತಿ ಮನೀಶಾಗೆ ನ್ಯಾಯ ಒದಗಿಸಿಕೊಡಲು ಇದೀಗ ನಿರ್ಭಯಾ ಪರ ಹೋರಾಡಿದ್ದ ವಕೀಲೆ ಸೀಮಾ ಖುಷ್ವಾ ಮುಂದೆ ಬಂದಿದ್ದಾರೆ.

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಕೊನೆಯವರೆಗೂ ಹೋರಾಡಿ ಗೆದ್ದ ವಕೀಲೆ ಸೀಮಾ ಈಗ ಸ್ವಯಂ ಪ್ರೇರಣೆಯಿಂದ ಮನೀಶಾ ಮನೆಗೆ ಭೇಟಿ ನೀಡಲು ನಿರ್ಧರಿಸಿದ್ದು, ಈ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಪ್ರಯತ್ನಿಸುವುದಾಗಿ ಪಣ ತೊಟ್ಟಿದ್ದಾರೆ. ಸ್ವ ಹಿತಾಸಕ್ತಿಯಿಂದ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ಹೋರಾಡಲು ಸೀಮಾ ತೀರ್ಮಾನಿಸಿದ್ದಾರೆ. ಈಕೆಯ ದಿಟ್ಟತನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Also Read  ಖ್ಯಾತ ನಟಿಯ ಬಾಯ್ ಫ್ರೆಂಡ್ ಜೊತೆಗಿನ ಸೆಕ್ಸ್ ವೀಡಿಯೋ ವೈರಲ್ ➤ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ವೀಡಿಯೋ ಟ್ರೆಂಡ್

error: Content is protected !!
Scroll to Top