ಕಡಬ: ಅಕ್ರಮ ದನ ಸಾಗಾಟ ತಡೆದ ಹಿಂದೂ ಸಂಘಟನೆಯ ಕಾರ್ಯಕರ್ತರು ➤ ಅಕ್ರಮ ಸಾಗಾಟದಲ್ಲಿ ಸಂಘಟನೆಯ ಮುಖಂಡ ಭಾಗಿ..⁉️

102 ನೆಕ್ಕಿಲಾಡಿ ಗ್ರಾಮದ ಕೆರ್ಮಾಯಿ ಎಂಬಲ್ಲಿಂದ ಮೇಯಲು ಬಿಟ್ಟಿದ್ದ ಜಾನುವಾರುಗಳನ್ನು ಸ್ಥಳೀಯ ಕೆಲವು ವ್ಯಕ್ತಿಗಳ ಸಹಕಾರದಿಂದ ಸಕಲೇಶಪುರ ಮೂಲದವರಿಗೆ ಮಾರಾಟ ಮಾಡಿದ್ದು, ಜಾನುವಾರನ್ನು ಸಾಗಾಟ ಮಾಡುತ್ತಿದ್ದ ವೇಳೆ ಸ್ಥಳೀಯರು ಅವರನ್ನು ತಡೆದು ಪೋಲಿಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಹಿಂದೂ ಸಂಘಟನೆಯೊಂದರ ಮಾಜಿ ಮುಖಂಡ ನ್ಯಾಯವಾದಿಯೋರ್ವರು ಈ ಅಕ್ರಮ ಸಾಗಾಟ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ನ್ಯಾಯವಾದಿಯ ತಂದೆ ಸೇರಿದಂತೆ ಐವರನ್ನು ಕಡಬ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Also Read  ಆಯುಷ್ ಇಲಾಖೆಯಿಂದ ಕೋವಿಡ್-19 ರೋಗ ನಿರೋಧಕ ಮಾತ್ರೆಗಳ ವಿತರಣೆ

error: Content is protected !!
Scroll to Top