ಬೆಸ್ಟ್ ಟೀಚರ್ ಆಗಬೇಕೆಂದು ಬಯಸುವಿರಾ..??? ►ಹಾಗಾದರೆ ಈ ಲೇಖನ ಓದಿ..!!!

(ನ್ಯೂಸ್ ಕಡಬ) newskadaba.com ಕಡಬ,ಸೆ.22. ಮುಂದಿನ ಜನಾಂಗದ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯವಾಗಿದೆ. ಇದು ಮಹತ್ವದ ಜವಾಬ್ದಾರಿಯುಳ್ಳ ಶಿಕ್ಷಕರಿಂದ ಮಾತ್ರ ಸಾಧ್ಯ.

ಶಿಕ್ಷಕರಾಗಬೇಕೆಂದು ಬಯಸುವ ಪ್ರತಿಯೊಬ್ಬರೂ ಈ ಲೇಖನವನ್ನು ಓದಲೇ ಬೇಕು. ಯಾಕೆಂದರೆ ತಮ್ಮ ವೃತ್ತಿಜೀವನವನ್ನು ಯಶಸ್ವಿಯಾಗಿ ಆರಂಭಿಸುವಲ್ಲಿ ಇದು ಸಹಕಾರಿಯಾಗಲಿದೆ. ಅತಿದೊಡ್ಡ ಜವಾಬ್ದಾರಿಯನ್ನು ಹೊಂದಿರುವ ಶಿಕ್ಷಕ ವೃತ್ತಿಗೆ ಬೇಕಾದ ಪೂರ್ವ ಸಿದ್ಧತೆ ಮಾತ್ರ ಅತ್ಯಲ್ಪ.

ಶಿಕ್ಷಕರು ತನ್ನ ವೃತ್ತಿ ಜೀವನದ ಆರಂಭದ ದಿನ ಉತ್ತಮ ಭಾವನೆ ಮೂಡಿಸುವುದರ ಜೊತೆಗೆ ಮಕ್ಕಳ ಜೊತೆ ಮಕ್ಕಳಾಗಿ ಬೆರೆಯುವುದು ಉತ್ತಮ. ತನ್ನ ವ್ಯಕ್ತಿತ್ವ ಮತ್ತು ಕಲಿಸುವ ವಿಧಾನ ಮತ್ತು ವಿಷಯದ ಮೇಲಿನ ಪ್ರೌಢಿಮೆ ಇದು ಶಿಕ್ಷಕರನ್ನು ಅಂತಹ ಸ್ಥಾನಕ್ಕೆ ತಲುಪಿಸುತ್ತದೆ. ಹೀಗಾಗಿ ಶಿಕ್ಷಕರು ಅತ್ಯಂತ ವೃತ್ತಿಪರರಾಗಿ ನಡೆದುಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳು ತಮ್ಮನ್ನು ಹೇಗೆ ಸ್ವೀಕರಿಸುತ್ತಿದ್ದಾರೆ ಎಂಬ ಬಗ್ಗೆ ಗಮನ ನೀಡಬೇಕು.

Also Read  ಶಾಲೆಯಲ್ಲಿ ಆಟದ ಮೈದಾನ ಕಡ್ಡಾಯ ➤ ಸುಪ್ರೀಂಕೋರ್ಟ್‌ ಆದೇಶ

ಯಾವಾಗಲೂ ಗೌರವ ಪಡೆದುಕೊಳ್ಳುವುದು ಮತ್ತು ನೀಡುವುದರ ನಡುವೆ ಸಮತೋಲನವಿರಲಿ. ಸಮಸ್ಯೆಗಳು ಎದುರಾದಾಗ ಅದನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಅರಿವಿರಲಿ. ಕೋಪ ಮಾಡಿಕೊಳ್ಳುವುದರ ಬದಲು ರಚನಾತ್ಮಕ ಅಪ್ರೋಚ್ ಮಾಡಲು ಯಾವಾಗಲೂ ಪ್ರಯತ್ನಿಸಿ. ಈ ಮೂಲಕ ಕೆಟ್ಟ ಶಿಕ್ಷಕ ಎಂಬ ಹಣೆಪಟ್ಟಿಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಬಹುದು.

ಮಕ್ಕಳ ಮುಂದೆ ದರ್ಪವನ್ನು ತೋರಿಸುವ ಯೋಚನೆಯನ್ನು ಕೈಬಿಡಿ. ಯಾಕೆಂದರೆ ವಿದ್ಯಾರ್ಥಿಗಳು ಇಂತಹ ವಿಷಯದಲ್ಲಿ ತುಂಬಾ ಅಸಹನೀಯರಾಗಿರುತ್ತಾರೆ. ಇದರ ಬದಲಾಗಿ ವಿದ್ಯಾರ್ಥಿಗಳ ಜೊತೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಿ. ಈ ಮೂಲಕ ಈಗಾಗಲೇ ಚಾಲ್ತಿಯಲ್ಲಿರುವ ಕಲಿಕೆಯ ನಿಯಮಗಳನ್ನು ಕೈಬಿಟ್ಟು ನಿಮ್ಮದೇ ರೀತಿಯಲ್ಲಿ ವಿದ್ಯಾರ್ಥಿಗಳ ಜೊತೆ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಇದರಿಂದ ವಿದ್ಯಾರ್ಥಿ-ಶಿಕ್ಷಕ ಸಂಬಂಧಕ್ಕೆ ಹೊಸ ಭಾಷ್ಯ ಬರೆದು ಉಭಯರು ಪರಸ್ಪರ ಮುಕ್ತವಾಗಿ ಮಾತನಾಡಲು ಸಾಧ್ಯವಾಗುತ್ತದೆ.

ಇತ್ತೀಚಿನ ಯಾವುದೇ ವಿಷಯದ ಬಗ್ಗೆ ನಿಮ್ಮಲ್ಲಿ ಮಾಹಿತಿಯಿರಲಿ. ಕಲಿಕೆಯ ಆಧುನಿಕ ವಿಧಾನಗಳನ್ನು ತಿಳಿದುಕೊಳ್ಳಿ. ಇದರಿಂದ ಕಲಿಸುವ ವೃತ್ತಿಯಲ್ಲಿ ಪರಿಣಾಮಕಾರಿ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.  ಅಂತರ್ಜಾಲದ ನೆರವು ಪಡೆದು ಹೊಸ ವಿಚಾರಗಳು ತಿಳಿದುಕೊಂಡು ಯಶಸ್ವಿ ಶಿಕ್ಷಕರಾಗಬಹುದು. ಸಾಂಪ್ರದಾಯಿಕ ಶಿಕ್ಷಕ ಕ್ರಮದ ಜೊತೆಗೆ ಸಹದ್ಯೋಗಿಗಳಿಂದಲೂ ನೆರವು ಪಡೆದುಕೊಳ್ಳಿ.

error: Content is protected !!
Scroll to Top