ಕೋಟ : ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಏಳನೇ ತರಗತಿ ವಿದ್ಯಾರ್ಥಿ

(ನ್ಯೂಸ್ ಕಡಬ) newskadaba.com ಕೋಟ, .01:  ಏಳನೆ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಯೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಕಾಜ್ರಳ್ಳಿ ಜನತಾ ಕಾಲೋನಿ ಶಿರಿಯಾರದಲ್ಲಿ ಬುಧವಾರ ನಡೆದಿದೆ.

 

ಮೃತ ವಿದ್ಯಾರ್ಥಿಯನ್ನು ಕಾಜ್ರಳ್ಳಿ ಜನತಾ ಕಾಲೊನಿ ಶಿರಿಯಾರ ಗ್ರಾಮ ಬ್ರಹ್ಮಾವರ ತಾಲೂಕು ಬಳಿಯ ಕವಿತಾ ಅವರ ಮಗ ತನುಷ್(12) ಎಂದು ಗುರುತಿಸಲಾಗಿದೆ.ತನುಷ್ 7 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು,ಕಲಿಯುವಿಕೆಯಲ್ಲಿ ಹಿಂದಿದ್ದು ಹೇಳಿದ ಮಾತನ್ನು ಕೇಳದೇ ಹಠಮಾರಿ ತನದಿಂದ ವರ್ತಿಸುತ್ತಿದ್ದು, ಈಗ ಆನ್ ಲೈನ್ ಕ್ಲಾಸ್ ನಡೆಯುತ್ತಿದ್ದು ಎಂದಿನಂತೆ ತಾಯಿ ಒಳ್ಳೆಯ ರೀತಿಯಲ್ಲಿ ಓದು ಎಂದು ಬುದ್ದಿ ಮಾತನ್ನು ಹೇಳಿ ತನ್ನ ಕೆಲಸಕ್ಕೆ ಹೋಗಿದರು. ತನುಷನು ಹಳೆಯ ಮನೆಯ ಕೊಠಡಿಯಲ್ಲಿದ್ದ ಜೋಕಾಲಿ ಸೀರೆಯನ್ನು ಪಕ್ಕಾಸಿಗೆ ಕಟ್ಟಿ, ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕಡಬ: ಅಕ್ರಮ ಜಾನುವಾರು ಸಾಗಾಟ- ಪಿಕಪ್ ಹಾಗೂ ಜಾನುವಾರು ಪೊಲೀಸ್ ವಶಕ್ಕೆ

 

error: Content is protected !!
Scroll to Top