ಉಡುಪಿ : ಸಾಲ ಬಾಧೆಯಿಂದ ಮೀನುಗಾರ ಆತ್ಮಹತ್ಯೆಗೆ ಶರಣು.!

(ನ್ಯೂಸ್ ಕಡಬ) newskadaba.com ಉಡುಪಿ, .01:  ಸಾಲ ಬಾಧೆಯಿಂದ ನೊಂದ ಮೀನುಗಾರರೊರ್ವರು ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 

ಮೃತ ಮೀನುಗಾರ 42 ವರುಷದ ಕೃಷ್ಣ ಕಾಂಚನ್ ಎಂಬುವವರು ಸುಮಾರು 20 ವರ್ಷಗಳಿಂದ ಮಲ್ಪೆಯಲ್ಲಿ ಮೀನುಗಾರಿಕೆ ವೃತ್ತಿಯನ್ನು ಮಾಡುತ್ತಿದ್ದರು .ಕಳೆದ 7 ರಿಂದ 8 ತಿಂಗಳಿಂದ ಸಾಲದ ಹಣ ಮರು ಪಾವತಿಸಲಾಗದ ಕಾರಣ ನೊಂದಿದ್ದರು. ಖಿನ್ನತೆಗೆ ಒಳಗಾಗಿದ್ದ ಇವರು ತಮ್ಮ ಹಳೆಯ ಮನೆಯಲ್ಲಿ ಪ್ಯಾನಿಗೆ ಹಗ್ಗ ಬಿಗಿದು ನೇಣಿಗೆ ಶರಣಾಗಿದ್ದಾರೆ. ಮೃತರ ಸಹೋದರ ನವೀನ್ ಮಲ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Also Read  ಬೆಳ್ತಂಗಡಿ: ಕಾರುಗಳ ಮಧ್ಯೆ ಢಿಕ್ಕಿ ► ಇಬ್ಬರು ಮೃತ್ಯು, ನಾಲ್ವರು ಗಂಭೀರ

error: Content is protected !!
Scroll to Top