ಬಿದ್ದು ಸಿಕ್ಕಿದ ಚಿನ್ನವನ್ನು ಮಾಲಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪ್ರಭಾಕರ್

(ನ್ಯೂಸ್ ಕಡಬ) newskadaba.com ಮಂಗಳೂರು, .01:  ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಸಿಕ್ಕಿದ ಒಂದು ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಬಂಗಾರದ ಗಟ್ಟಿಯನ್ನು ಮಂಗಳೂರಿನ ಯುವಕನೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಪ್ರಭಾಕರ್ ಪ್ರಭು ಎಂಬುವರು ಮಂಗಳೂರಿನ ಅಡ್ಯಾರ್ ನ ಸಹ್ಯಾದ್ರಿ ಕಾಲೇಜಿನ ಬಳಿ ವಾಹನದಲ್ಲಿಬರುತ್ತಿದ್ದಾಗ ಒಂದು ಪರ್ಸ್ ಸಿಕ್ಕಿರುವ ಬಗ್ಗೆ ಅವರು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಂತ್ ಅವರ ಬಳಿ ತಿಳಿಸಿದ್ದರು. ಶಾಸಕ ವೇದವ್ಯಾಸ ಕಾಂತ್ ಅವರ ಸಲಹೆಯಂತೆ ಮಹಾಲಕ್ಷ್ಮಿ ಜ್ಯುವೆಲ್ಲರ್ಸ್ ಮಾಲೀಕರಾಗಿರುವ ರವೀಂದ್ರ ನಿಕ್ಕಂ ಅವರಲ್ಲಿ ವಿಚಾರ ತಿಳಿಸಿದ್ದಾರೆ, ಬಳಿಕ ಅವರು ತಮ್ಮ ಆಪ್ತರ ವಲಯದಲ್ಲಿ ಪ್ರಸ್ತಾಪಿಸಿದಾಗ, ಅಡ್ಯಾರ್ ಬಳಿಯ ನಿವಾಸಿ ಕೃಷ್ಣ ಆಚಾರ್ ಅವರಿಗೆ ಸೇರಿದ ಚಿನ್ನ ಎಂದು ತಿಳಿದು ಬಂದಿದೆ. ಬಂಗಾರದ ಗಟ್ಟಿಯನ್ನುಕರಗಿಸಿ ಅದರಿಂದ ಆಭರಣ ಮಾಡುವ ಕೃಷ್ಣ ಆಚಾರ್ ರವರು ಹಿಂದಿನ ದಿನ ಬಂಗಾರದ ಗಟ್ಟಿಯನ್ನು ಕಳೆದು ಕೊಂಡಿದ್ದರು.

Also Read  ವಳಕಡಮ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಉದ್ಘಾಟನೆ ➤ಹೈನುಗಾರಿಕೆಯಿಂದ ಮಹಿಳೆಯರೂ ಅರ್ಥಿಕವಾಗಿ ಸಬಲೀಕರಣ-ರವಿರಾಜ್ ಹೆಗ್ಡೆ

ಇಂದು ಮಂಗಳೂರಿನ ಜೋಡು ಮಥ ರಸ್ತೆಯಲ್ಲಿರುವ ಸೇವಾಂಜಲಿ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಟ್ರಸ್ಟ್ ಪ್ರಮುಖರಾದ ಹನುಮಂತ ಕಾಂತ್ ಅವರ ನೇತೃತ್ವದಲ್ಲಿ ರವೀಂದ್ರ ನಿಕ್ಕಂ ಅವರ ಉಪಸ್ಥಿತಿಯಲ್ಲಿ ಪ್ರಭಾಕರ್ ಪ್ರಭು ಅವರು ಕೃಷ್ಣ ಆಚಾರ್ ಅವರಿಗೆ ಚಿನ್ನವನ್ನು ಹಸ್ತಾಂತರಿಸಿದರು.

 

error: Content is protected !!
Scroll to Top