ನಿರೂಪಕಿ ಅನುಶ್ರೀ ಬಗ್ಗೆ ಬಾಯ್ಬಿಟ್ಟ ನೈಜೀರಿಯಾ ಪ್ರಜೆ ➤ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ನಿರೂಪಕಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 01. ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ನೈಜೀರಿಯಾ ಪ್ರಜೆಗೂ ನಟಿ, ನಿರೂಪಕಿ ಅನುಶ್ರೀ ಪರಿಚಯ ಇದೆ. ಬೆಂಗಳೂರಿನಲ್ಲಿ ನಡೆದ ಡ್ರಗ್ಸ್‌ ಪಾರ್ಟಿಗಳಲ್ಲಿ ಅನುಶ್ರೀಯನ್ನು ನೋಡಿರುವುದಾಗಿ ಈತ ಹೇಳಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

 

ಈಗಾಗಲೇ ಬಂಧಿತಳಾಗಿರುವ ಕಿಶೋರ್ ಗೆಳತಿ ಆಸ್ಕಾಳಿಗೂ ಅನುಶ್ರೀ ಪರಿಚಯವಿದೆ. ಅಲ್ಲದೇ ತರುಣ್‌ ರಾಜ್‌ ಕೂಡ ಅನುಶ್ರೀ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು ಎನ್ನುವ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಅನುಶ್ರೀ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳು ಕಂಡು ಬರುತಿದೆ.

Also Read  ಕುಟ್ರುಪ್ಪಾಡಿ ಹಾ.ಉ.ಸ.ಸಂಘದ ವಾರ್ಷಿಕ ಸಾಮಾನ್ಯ ಸಭೆ: 2.80ಲಕ್ಷ ರೂ.ನಿವ್ವಳ ಲಾಭ ► ಪ್ರತಿ ಲೀ.75ಪೈಸೆ ಬೋನಸ್ ಘೋಷಣೆ

error: Content is protected !!
Scroll to Top