ಮಂಗಳೂರು: ಅ. 02 ರಂದು ವಿಖಾಯ ರಕ್ತದಾನ ಅಭಿಯಾನ ಸಮಾರೋಪ ಸಮಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 30. ಎಸ್ ಕೆಎಸ್ಎಸ್ ಎಫ್ ವಿಖಾಯ ರಕ್ತದಾನಿ ಬಳಗದ ವತಿಯಿಂದ ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ರಕ್ತದಾನ ಶಿಬಿರ ಅಭಿಯಾನದ ಸಮಾರೋಪ ಸಮಾರಂಭವು ಆಕ್ಟೋಬರ್ 2 ಗಾಂಧಿ ಜಯಂತಿಯಂದು ಮಂಗಳೂರಿನ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಜರುಗಲಿದೆ ಎಂದು ದ.ಕ ಜಿಲ್ಲಾ ಎಸ್್ಕೆ್ಕೆಎಸ್ಸೆಸ್ಸೆಫ್ ವಿಖಾಯ ಸಮಿತಿ ತಿಳಿಸಿದೆ.

ಬೆಳಿಗ್ಗೆ 9 ಗಂಟೆಗೆ ಪ್ಲಾಸ್ಮಾ ಹಾಗೂ ರಕ್ತದಾನಿಗಳ ಸಂಗಮ ನಡೆಯಲಿದ್ದು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಹಾಗೂ ಯೇನೆಪೊಯ ಬ್ಲಡ್ ಬ್ಯಾಂಕ್ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಮದ್ಯಾಹ್ನ 2: 30 ಗಂಟೆಗೆ ರಕ್ತದಾನ ಅಭಿಯಾನದ ಸಮಾರೋಪ ಸಮಾರಂಭ ನಡೆಯಲಿದ್ದು, ದ.ಕ ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಸಯ್ಯಿದ್ ಅಮೀರ್ ತಂಙಳ್ ಕಿನ್ಯ ಇವರು ನೇತೃತ್ವ ನೀಡಲಿದ್ದಾರೆ. ಶೈಖುನಾ ಮಿತ್ತಬೈಲು ಉಸ್ತಾದರ ಸುಪುತ್ರ ಬಹು ಇರ್ಷಾದ್ ದಾರಿಮಿ ಅಲ್ ಜಝ್ಹರಿ ಕಾರ್ಯಕ್ರಮವನ್ನು ಉಧ್ಘಾಟಿಸಲಿದ್ದಾರೆ.‍ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಜಿಲ್ಲಾ ಚೇರ್ಮನ್ ಸಯ್ಯಿದ್ ಇಸ್ಮಾಯಿಲ್ ತಂಙಳ್ ರವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾಧಿಕಾರಿ ಡಾlರಾಜೇಂದ್ರ ಕೆ.ವಿ. ಭಾಗವಹಿಸಲಿದ್ದಾರೆ. ದ.ಕ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ| ಸೆಲ್ವಮಣಿ, ಶಾಸಕರಾದ ಯು.ಟಿ ಖಾದರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಚಂದ್ರ ಬಾಯರಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು SKSSF ವಿಖಾಯ ದ.ಕ. ಜಿಲ್ಲಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಕರ್ತವ್ಯನಿರತ ಸರ್ಕಲ್ ಇನ್ಸ್ ಪೆಕ್ಟರ್​ ಮೇಲೆ ಹಲ್ಲೆ ! ➤  ಮಾಜಿ ಕಾರ್ಪೊರೇಟರ್​ ಬಂಧನ

error: Content is protected !!
Scroll to Top