(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 30. 33 ಕೆ.ವಿ ಪುತ್ತೂರು- ಕಡಬ ಹಾಗೂ ಮಾಡಾವು ಕಟ್ಟೆ – ಬೆಳ್ಳಾರೆ ಏಕಮಾರ್ಗವನ್ನು ದ್ವಿಮಾರ್ಗಗೊಳಿಸುವ ಕಾಮಗಾರಿಯು ನಡೆಯತ್ತಿರುವುದರಿಂದ ಅ. 1 ರ ಗುರುವಾರ ಹಾಗೂ ಅ.3 ರ ಶನಿವಾರದಂದು ವಿದ್ಯುತ್ ಸ್ಥಗಿತಗೊಳ್ಳಲಿದೆ.
ಅ.1 ಹಾಗೂ 3ರಂದು ಬೆಳಗ್ಗೆ ಗಂಟೆ 10 ರಿಂದ ಸಂಜೆ 6 ಗಂಟೆಯ ತನಕ 33ಕೆ.ವಿ ಪುತ್ತೂರು- ಕಡಬ ದ್ವಿಮಾರ್ಗಗೊಳಿಸುವ ಹಿನ್ನೆಲೆಯಲ್ಲಿ ಮಾಡಾವು ಕಟ್ಟೆ- ಬೆಳ್ಳಾರೆ ದ್ವಿಮಾರ್ಗಗೊಳಿಸುವ ಕಾಮಗಾರಿ ಪ್ರಗತಿಯು ನಡೆಯಲಿರುವುದರಿಂದ ವಿದ್ಯುತ್ ನಿಲುಗಡೆಯಾಗಲಿದೆ. ಹಾಗಾಗಿ 33/11 ಕೆ.ವಿ ಕಡಬ, ನೆಲ್ಯಾಡಿ, ಸುಬ್ರಹ್ಮಣ್ಯ ಹಾಗೂ ಬೆಳ್ಳಾರೆ ವಿದ್ಯುತ್ ಉಪಕೇಂದ್ರದಿಂದ ವ್ಯಾಪ್ತಿಯ ಎಲ್ಲಾ 11ಕೆವಿ ಫೀಡರ್‌ಗಳಿಂದ ಸರಬರಾಜಾಗುವ ಪ್ರದೇಶಗಳಲ್ಲಿ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂನ ಪ್ರಕಟಣೆ ತಿಳಿಸಿದೆ.