ರಾತ್ರೋ ರಾತ್ರಿ ಅಡಿಕೆ ಕಳ್ಳತನ ಗೈದ ಖದೀಮರು..!!

(ನ್ಯೂಸ್ ಕಡಬ) newskadaba.com ಕಾಯರ್ತಡ್ಕ, ಸೆ. 30. ಕಾಯರ್ತಡ್ಕದಲ್ಲಿ ಸುಮಾರು 12 ವರ್ಷಗಳಿಂದ ಅಡಿಕೆ ವ್ಯಾಪಾರ ನಡೆಸುತ್ತಿದ್ದ ಪುತ್ತೂರಿನ ಸಿದ್ದೀಕ್ ಆಲಿಯವರ ಕಾರುಣ್ಯ ಟ್ರೇಡರ್ಸ್ ಗೆ ತಡ ರಾತ್ರಿ ನುಗ್ಗಿದ್ದ ಕಳ್ಳರ ತಂಡವೊಂದು ಸುಮಾರು 65 ಕೆಜಿಯಂತೆ ತುಂಬಿಸಿದ್ದ 9 ಗೋಣಿ ಅಡಿಕೆಯನ್ನು ಹೊತೊಯ್ದ ಘಟನೆ ನಡೆದಿದೆ.

ಎಂದಿನಂತೆ ಅಂಗಡಿಯಲ್ಲಿ ಕೆಲಸಕ್ಕಿರುವವರು ಬಂದು ಬಾಗಿಲು ತೆರೆಯಲೆಂದು ಬಂದಾಗ ಬೀಜ ಮುರಿದಿರುವುದು ಕಂಡು ಬಂದಿದೆ.ಒಳ ಹೋಗಿ ನೋಡಿದ ವೇಳೆ ಅಡಿಕೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Also Read  ಲವ್ ಜಿಹಾದ್ ತಡೆಗೆ ಸಹಾಯವಾಣಿ ಆರಂಭಿಸಿದ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆ

 

 

error: Content is protected !!
Scroll to Top