ಡ್ರಗ್ಸ್ ಪ್ರಕರಣ : ಕಿಶೋರ್​ ಸ್ನೇಹಿತೆ ಆಸ್ಕಾ ಅರೇಸ್ಟ್ , ಮತ್ತಷ್ಟು ಮಾಹಿತಿ ಬಹಿರಂಗ.

(ನ್ಯೂಸ್ ಕಡಬ) newskadaba.com ಬೆಂಗಳೂರು , ಸೆ. 30. ಮಾದಕ ವಸ್ತು ಜಾಲ ಪ್ರಕರಣದಲ್ಲಿ ಈಗಾಗಲೇ ಬಾಲಿವುಡ್​ ಡ್ಯಾನ್ಸರ್​ ಕಿಶೋರ್​ ಅಮನ್​ ಶೆಟ್ಟಿಯ ಬಂಧನವಾಗಿದ್ದು, ವಿಚಾರಣೆಯ ವೇಳೆ ಸಾಕಷ್ಟು ಮಹತ್ವದ ಸಂಗತಿಗಳು ಬಯಲಿಗೆ ಬರುತ್ತಿದ್ದೆ. ಇದೀಗ ಕಿಶೋರ್​ ಸ್ನೇಹಿತೆ ಕುರಿತು ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ.

 

ಕಿಶೋರ್​ ಸ್ನೇಹಿತೆಯಾಗಿರುವ ಆಸ್ಕಾ ಸಹ ಸಿಸಿಬಿ ಅಧಿಕಾರಿಗಳಿಂದ ಬಂಧನವಾಗಿದ್ದಾಳೆ. ಮಣಿಪುರ ಮೂಲದ ಆಸ್ಕಾ ಹಲವು ವರ್ಷಗಳ ಹಿಂದೆಯೇ ಮಂಗಳೂರಿನಲ್ಲಿ ವಾಸವಿದ್ದಳು.ಹಗಲು ವೇಳೆ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಆಸ್ಕಾ, ರಾತ್ರಿ ಮಂಗಳೂರಿನ ಪಬ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಕಿಶೋರ್​ ಶೆಟ್ಟಿಯ ಪರಿಚಯವಾದ ಬಳಿಕ ಡ್ರಗ್ಸ್ ಪಾರ್ಟಿಗಳಿಗೆ ಪ್ರವೇಶ ನೀಡುತ್ತಿದ್ದಳು ಎನ್ನಲಾಗಿದೆ. ಇದೀಗ ಸಿಸಿಬಿ ಅಧಿಕಾರಿಗಳು ಆಸ್ಕಾ ಫ್ರೆಂಡ್ಸ್​ಗೂ ನೋಟಿಸ್​ ನೀಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Also Read  ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿ..!

 

 

error: Content is protected !!
Scroll to Top