ಬೆಳ್ಳಾರೆ: ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲು ಶಾಸಕರಿಗೆ ಮನವಿ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಸೆ. 29. ಸುಳ್ಯ ತಾಲೂಕಿನ ಬೆಳ್ಳಾರೆ ಎಂಬಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು. 2019 ರಲ್ಲಿ ಆಶಾ ತಿಮ್ಮಪ್ಪರವರು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿದ್ದ ಸಂದರ್ಭ ಜಿ.ಪಂ. ನಿಂದ ನಿರ್ಣಯವನ್ನು ಕಳುಹಿಸಿ ಕೊಡಲಾಗಿತ್ತು. ಸುಳ್ಯ ತಾಲೂಕಿನ ಎರಡನೇ ಅತೀ ದೊಡ್ಡ ಪಟ್ಟಣವಾಗಿರುವ ಬೆಳ್ಳಾರೆಯಲ್ಲಿ 24×7 ಸೇವೆ ವ್ಯವಸ್ಥೆಯ ಆರೋಗ್ಯ ಕೇಂದ್ರವಿದ್ದರೂ, ರಾತ್ರಿ ವೇಳೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯಾಧಿಕಾರಿಗಳು ಇಲ್ಲದೇ ಇರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಸಂಜೆಯ ಹೊತ್ತು ಪ್ರಾರಂಭವಾಗುವ ಕಾಯಿಲೆಗಳಿಂದಾಗಿ ಜನರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ಸಂಜೆಯ 4 ಗಂಟೆಯ ನಂತರ ಯಾವುದೇ ಖಾಸಗಿ ಆಸ್ಪತ್ರೆ ವೈದ್ಯರುಗಳು ಹಾಗೂ ಸರಕಾರಿ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದೇ ಸಮಸ್ಯೆ ಆಗುತ್ತಿರುವುದರಿಂದ ರಾತ್ರಿ ಸಮಯದಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರನ್ನು ನಿಯೋಜಿಸಿ, ಗ್ರಾಮಸ್ಥರ ಬಹು ದೊಡ್ಡ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬೆಳ್ಳಾರೆ ಪ್ರಾ.ಆ. ಕೇಂದ್ರವನ್ನು 24×7 ಸೇವೆಗೆ ಲಭ್ಯವಾಗುವಂತೆ ಸೂಕ್ತ ವೈದ್ಯರನ್ನು ನಿಯೋಜಿಸಿ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಮಹಿಳಾ ಸಂಘಟನೆಯ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗೀತಾ ಪ್ರೇಮ್, ಲೀಲಾವತಿ ಶೆಟ್ಟಿ ಮಂಡೆಪು, ಶಕೀಲಾ ವೈ ಶೆಟ್ಟಿ, ಹಾಗೂ ನಿವೃತ್ತ ಕಸ್ಟಮ್ಸ್ ಅಧಿಕಾರಿ ರಾಮಕೃಷ್ಣ ಭಟ್, ಸುರೇಶ್ ರೈ ಪನ್ನೆ ಮತ್ತಿತರರು ಉಪಸ್ಥಿತರಿದ್ದರು.

Also Read  ಸ್ಕೂಟರ್ ಮೇಲೆ ವಿದ್ಯುತ್ ತಂತಿ ಬಿದ್ದು ಗಾಯಗೊಂಡಿದ್ದ ಯುವಕ ಮೃತ್ಯು..!

error: Content is protected !!
Scroll to Top