ಗುಂಡ್ಯ : ಅಪರಿಚಿತ ಶವ ಪತ್ತೆ..!!

(ನ್ಯೂಸ್ ಕಡಬ) newskadaba.com ಗುಂಡ್ಯ, ಸೆ. 29. ಕಡಬ ತಾಲೂಕಿನ ಗುಂಡ್ಯದಲ್ಲಿ ಶವವೊಂದು ಪತ್ತೆಯಾಗಿದೆ.ಸುಬ್ರಹ್ಮಣ್ಯ ಮಾರ್ಗವಾಗಿ ಹೋಗುವ ಗುಂಡ್ಯ ಸೇತುವೆಯ ಅಡಿಯಲ್ಲಿ ಇಂದು ಮುಂಜಾನೆ ಅಪಚರಿತ ಶವವೊಂದು ಕಂಡು ಬಂದಿದೆ. ಯಾರೋ ಕೊಲೆಗೈದು ಶವ ಬೀಸಾಡಿರುವುದು ಮೇಲ್ನೊಟಕ್ಕೆ ವ್ಯಕ್ತವಾಗಿದೆ.

 

ಮೃತ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ. ಸೇತುವೆಯ ಅಡಿಯಲ್ಲಿ ಶವವೊಂದು ತೇಲಾಡುತ್ತಿರುವುದನ್ನು ಗಮನಿಸಿದ ಪ್ರವಾಸಿಗರು ಸ್ಥಳೀಯರಿಗೆ ಮಾಗಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ಸ್ಥಳೀಯರ ಸಹಾಯದೊಂದಿಗೆ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತದ್ದು, ಬಳಿಕ ಪುತ್ತೂರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಶವ ಪತ್ತೆಯಾದ ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಎಸೈ ಈರಯ್ಯ ಡಿ.ಎನ್ ಹಾಗೂ ಸಿಬ್ಬಂದಿಗಳು  ಭೇಟಿ ನೀಡಿ ಮೃತ ವ್ಯಕ್ತಿಯ ಮಾಹಿತಿ ಕಲೆ ಹಾಕುವಲ್ಲಿ ತನಿಖೆ ನಡೆಸುತ್ತಿದ್ದಾರೆ.

Also Read  ಅಂಬಾನಿ ಮಗನನ್ನು ವರಿಸಲಿರುವ ರಾಧಿಕಾ ಮರ್ಚೆಂಟ್

 

 

error: Content is protected !!
Scroll to Top