ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಅಕ್ರಮ ಮರ ಸಾಗಾಟ ➤ ವಿಶೇಷ ಅರಣ್ಯ ಸಂಚಾರಿ ದಳದಿಂದ ಮಿಂಚಿನ ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ. 29. ಬೆಳ್ತಂಗಡಿ ತಾಲೂಕಿನ ಮುಂಡಾಜೆ , ಕಡಿರುದ್ಯವರದ ವಳಂಬ್ರ ಕುದುರೆಮುಖ ವನ್ಯಜೀವಿ ವಲಯ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಮರ ಕಡಿಯುತ್ತಿರುವ ಬಗ್ಗೆ ಖಚಿತ ಮಾಹಿತಿ ಅರಣ್ಯ ಘಟಕದ ಪುತ್ತೂರಿನ ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.

 

ತಂಡಕ್ಕೆ ದೊರೆತ ಹಿನ್ನಲೆಯಲ್ಲಿ ಸೆ. 28ರ ಕಳೆದ ದಿನ 4ಕಿ. ಮಿ ಅರಣ್ಯ ಪ್ರದೇಶದಲ್ಲಿ ನಡೆದುಕೊಂಡು ಹೋಗಿ ದಾಳಿ ಮಾಡಿದ್ದು ಬೇಂಗ ಗಾತಿಯ ಮರದ ದಿಮ್ಮಿ , ಹಲಗೆ , ಸೈಜು ಗಳನ್ನು ಪತ್ತೆ ಹಚ್ಚಿದ್ದಾರೆ. 50.833 ಸಿಎಫ್‍ಟಿ ಆಗಿದ್ದು ಇದರ ಮೌಲ್ಯ 1 ಲಕ್ಷದ 50 ಸಾವಿರ. ಈ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ.

Also Read  ವಿಚಿತ್ರ ಖಾಯಿಲೆಯಿಂದ ಮಲಗಿದ್ದಲ್ಲೇ ಇದ್ದಾನೆ ಆರು ವರ್ಷದ ಬಾಲಕ ► ಕಂಗಾಲಾದ ಕಡಬ ಪಿಜಕ್ಕಳದ ಬಡ ಕುಟುಂಬ

 

ಈ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆಗೆ ಬೆಳ್ತಂಗಡಿ ವನ್ಯಜೀವಿ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ. ಬೆಂಗಳುರು ಸಿಐಡಿ ಅರಣ್ಯ ಘಟಕದ ಪುತ್ತೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸೈ ಜಯ ಕೆ, ಸುಂದರ್ ಶೆಟ್ಟಿ , ವಿಜಯ, ಉದಯ ರಾಧಾಕೃಷ್ಣ. ಜಿ.ಬಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

error: Content is protected !!
Scroll to Top