(ನ್ಯೂಸ್ ಕಡಬ) newskadaba.com ಸೆ. 29. ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ದೇಶದ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ಸ್ವಾತಂತ್ರ್ಯವನ್ನು ಧಮನಿಸಲು ಹೊರಟಿರುವ ಫ್ಯಾಸಿಸ್ಟ್ ನಿಲುವು ಖಂಡನೀಯ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಉಮರ್ ಅಸ್ಸಖಾಫ್ ತಿಳಿಸಿದರು.
ಮಾಧ್ಯಮಗಳನ್ನು ಕೈಗೊಂಬೆಗಳಾಗಿ ಹಾಗೂ ತಮ್ಮ ಮಾರ್ಗದರ್ಶನದಂತೆಯೇ ವರ್ತಿಸಬೇಕೆನ್ನುವ ಆಳ್ವಿಕೆ ನಡೆಸುವವರ ಮನೋಭಾವವು ದೇಶಕ್ಕೆ ಹಾಗೂ ರಾಜ್ಯಕ್ಕೆ ಮಾರಕವಾಗಿದೆ. ಒಂದು ಮಾಧ್ಯಮದ ಮೇಲೆ ಅನ್ಯಾಯವಾಗಿ ದೌರ್ಜನ್ಯ ನಡೆಯುವಾಗ ಇತರ ಮಾಧ್ಯಮಗಳು ಮೌನಕ್ಕೆ ಶರಣಾಗಿರುವುದು ಕೂಡ ಅವರ ಭ್ರಷ್ಟತೆಗೆ ಸ್ಪಷ್ಟ ಸಾಕ್ಷಿಯಾಗಿದೆ. ಇದರ ವಿರುದ್ಧ ಪ್ರಜ್ಞಾವಂತ ಜನತೆ ಧ್ವನಿ ಎತ್ತಬೇಕಾದ ಅನಿವಾರ್ಯತೆ ಇದೆ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರು ಅಭಿಪ್ರಾಯ ಪಟ್ಟಿದ್ದಾರೆ.