ಸಿಹಿ ತಿಂಡಿಗಳ ಮಾರಾಟಕ್ಕೆ ‘ಬೆಸ್ಟ್‌ ಬಿಫೋರ್‌’ ಡೇಟ್‌ ಕಡ್ಡಾಯ!!

 (ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 29. ಅಕ್ಟೋಬರ್‌ 1 ರಿಂದ ಬೇಕರಿ ಸೇರಿದಂತೆ ಎಲ್ಲಡೆ ಸಿಹಿ ತಿಂಡಿಗಳ ಮಾರಾಟದ ಸಂದರ್ಭ ಉತ್ಪನ್ನಗಳಲ್ಲಿ ಬಳಕೆಯ ಅವಧಿ ನಮೂದಿಸುವುದು (ಬೆಸ್ಟ್‌ ಬಿಫೋರ್‌ ಡೇಟ್‌) ಕಡ್ಡಾಯವಾಗಲಿದೆ. ಆಹಾರ ಸುರಕ್ಷತೆ ಮತ್ತು ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್‌ ಇಂಡಿಯಾ (ಎಫ್‌ಎಸ್‌ಎಸ್‌ಎಐ) ಈ ಸಂಬಂಧ ಆದೇಶ ಹೊರಡಿಸಿದೆ.

ಪ್ಯಾಕೇಜ್‌ಗಳಲ್ಲಿರುವ ಸಿಹಿ ತಿಂಡಿಗಳು ಮಾತ್ರವಲ್ಲದೆ, ಟ್ರೇಗಳಲ್ಲಿ ಲೂಸ್‌ ಆಗಿ ಇಡುವ ಸಿಹಿ ತಿಂಡಿಗಳಿಗೆ ಸಂಬಂಧಿಸಿಯೂ ಬಳಕೆಗೆ ಕೊನೆಯ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಇದರಿಂದ ಗ್ರಾಹಕರಿಗೆ ತಾವು ತಾಜಾ ಸಿಹಿ ತಿಂಡಿಗಳನ್ನು ಪಡೆಯುತ್ತಿರುವುದಕ್ಕೆ ಖಾತರಿ ಸಿಕ್ಕಿದಂತಾಗುತ್ತದೆ.

ಈ ನಿಯಮವು ದೇಶಾದ್ಯಂತ ಅಂದರೆ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯವಾಗುತ್ತದೆ. ಸಾರ್ವಜನಿಕರ ಹಿತಾಸಕ್ತಿಯ ದೃಷ್ಟಿಯಿಂದ ಈ ನಿಯಮ ಜಾರಿಗೆ ತರಲಾಗುತ್ತಿದೆ ಎಂದು ಎಫ್‌ಎಸ್ಎಸ್‌ಎಐನ ಫುಡ್‌ ಕಮೀಷನರ್‌ ಅವರು ತಿಳಿಸಿಸಿದ್ದಾರೆ.ಇದುವರೆಗೆ ಪ್ಯಾಕೇಜ್‌ ಆಹಾರಗಳಿಗೆ ‘ಬೆಸ್ಟ್‌ ಬಿಫೋರ್‌’ ದಿನಾಂಕ ಕಡ್ಡಾಯವಾಗಿತ್ತು. ಇದೀಗ ಬೇಕರಿ ಸೇರಿದಂತೆ ಇತರೆ ಎಲ್ಲ ಸಿಹಿ ತಿಂಡಿಗಳ ಅಂಗಡಿಗಳಲ್ಲಿ ಟ್ರೇಯಲ್ಲಿಟ್ಟು ಮಾರಾಟ ಮಾಡುವ ಸ್ವೀಟ್ಸ್‌ಗಳಿಗೂ ‘ಬೆಸ್ಟ್‌ ಬಿಫೋರ್‌’ ದಿನಾಂಕ ಕಡ್ಡಾಯವಾಗಲಿದೆ.

Also Read  ಮುಡಾ ಹಗರಣ: ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಸಿಎಂ ಮೇಲ್ಮನವಿ ಸಲ್ಲಿಕೆ

error: Content is protected !!
Scroll to Top