ಮಂಗಳೂರು: ತುಳುನಾಡಿನ ದೈವ ಕೊರಗಜ್ಜನ ಆಶೀರ್ವಾದ ಪಡೆದ ಡಿ ಬಾಸ್

(ನ್ಯೂಸ್ ಕಡಬ) newskadaba.com ಮಂಗಳೂರು,  ಸೆ. 27:  ತುಳುನಾಡಿನ ಅತ್ಯಂತ ಕಾರ್ಣಿಕ ಹಾಗೂ ಪ್ರಸಿದ್ಧ ದೈವಗಳಲ್ಲಿ ಒಂದಾದ ಕೊರಗಜ್ಜನ ದರ್ಶನವನ್ನು ಕನ್ನಡ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಪಡೆದುಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.

ಹೇಳಿ ಕೇಳಿ ಡಿ ಬಾಸ್ ಅಪ್ಪಟ್ಟ ಪ್ರಾಣಿ ಪೇಮಿ. ಯಾವಾಗಲು ತಮ್ಮ ಮುದ್ದಿನ ಕುದುರೆಗಳ ಜೊತೆ ಕಾಲ ಕಳೆಯುತ್ತ, ಕಾಡು ಮೇಡು ಸುತ್ತುತ, ಹೊಸ ಹೊಸ ಸ್ಥಳಗಳಿಗೆ ಭೇಟಿ ನೀಡುವ ದರ್ಶನ್ ರವರು, ಕೆಲ ತಿಂಗಳ ಹಿಂದೆ ಮಂಗಳೂರಿಗೆ ಭೇಟಿ ನೀಡಿದ್ದರು. ಬಳಿಕ ಡಿ. ಬಾಸ್ ದರ್ಶನ್ ರವರು ಕೊರಗಜ್ಜನ ಗುಡಿಗೆ ತೆರಳಿ ಪ್ರಸಿದ್ಧ ಕೊರಗಜ್ಜನ ದರ್ಶನವನ್ನು ಪಡೆದುಕೊಂಡಿದ್ದಾರೆ.

Also Read  ಜಂಬೂಸವಾರಿ: ಸರಳ ದಸರಾಗೆ ಅರಣ್ಯ ಇಲಾಖೆಯಿಂದ ಐದು ಆನೆಗಳ ಪಟ್ಟಿ ಸಿದ್ದ

 

 

 

ಇದೀಗಾ ಅವರು ದೇವರ ಮುಂದೆ ಕೈ ಮುಗಿಯುತ್ತಾ ನಿಂತಿರುವ ಕೆಲವೊಂದು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ. ತಮ್ಮ ಸ್ನೇಹಿತರ ಜೊತೆಗೆ ಕೊರಗಜ್ಜ್ನ ಕ್ಷೇತ್ರಕ್ಕೆ ಭೇಟಿ ನೀಡಿರುವ ದರ್ಶನ್ ರವರವು ಅಜ್ಜನ ಮುಂದೆ ತಮ್ಮ ಕೋರಿಕೆಯನ್ನು ಇರಿಸಿದ್ದಾರೆ. ತುಳುನಾಡಿನ ಆರಾದ್ಯ ದೈವ ಅಜ್ಜನ ಆಶೀರ್ವಾದ ಪಡೆದಿರುವುದು ದರ್ಶನ್ ಅಭಿಮಾನಿಗಳಲ್ಲಿ ಹಾಗೂ ಕರಾವಳಿ ಜನರಲ್ಲಿ ಮತ್ತಷ್ಟು ಸಂತಸ ತಂದಿದೆ.

 

Also Read  ವಿಡಿಯೋ ಲೈಕ್ ಮಾಡಿ 5 ಲಕ್ಷ ರೂ. ಕಳೆದುಕೊಂಡ ಭೂಪ..!

 

error: Content is protected !!
Scroll to Top